ಅಸಭ್ಯ ಬಟ್ಟೆ ತೊಟ್ಟು ಮುಜುಗರಕ್ಕೀಡಾದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ!

Published: 26 Aug 2018 05:31 PM IST
ಪರಿಣಿತಿ ಚೋಪ್ರಾ
ಮುಂಬೈ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಟೈಟ್ ಡ್ರೆಸ್ ಧರಿಸಿ ಮುಜುಗರಕ್ಕೀಡಾಗಿದ್ದಾರೆ. 

ನಮಸ್ತೆ ಇಂಗ್ಲೆಂಡ್ ಚಿತ್ರದಲ್ಲಿ ನಟ ಅರ್ಜುನ್ ಕಪೂರ್ ಗೆ ಜೋಡಿಯಾಗಿ ಪರಿಣಿತಿ ಚೋಪ್ರಾ ಅಭಿನಯಿಸಿದ್ದು ಚಿತ್ರದ ಪ್ರಮೋಶನ್ ಗಾಗಿ ಮುಂಬೈನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.  

ಈ ವೇಳೆ ಪರಿಣಿತಿ ಚೋಪ್ರಾ ತೆಳು ನೀಲಿ ಬಣ್ಣದ ಟೈಟ್ ಮಿನಿ ಡ್ರೆಸ್ ಧರಿಸಿದ್ದರು. ತಾವು ತೊಟ್ಟಿದ್ದ ಉಡುಪು ಟೈಟ್ ಆಗಿದ್ದರಿಂದ ಕಾರ್ಯಕ್ರಮದಲ್ಲಿ ಡ್ರೆಸ್ ಅನ್ನು ಸರಿ ಮಾಡಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದರು. ಇದನ್ನು ಗಮನಿಸಿದ ನೆಟಿಗರು ಇದೀಗ ಪರಿಣಿತಿಯನ್ನು ಟ್ರೋಲ್ ಮಾಡುತ್ತಿದ್ದಾರೆ. 

ನೆಟಿಗರು ಒಂದು ರೀತಿಯ ಕಮೆಂಟ್ ಮಾಡುವ ಮೂಲಕ ಪರಿಣಿತಿ ಚೋಪ್ರಾರನ್ನು ಟ್ರೋಲ್ ಮಾಡುತ್ತಿದ್ದಾರೆ. 

ಇನ್ನು ನಮಸ್ತೆ ಇಂಗ್ಲೆಂಡ್ ಚಿತ್ರ ಅಕ್ಟೋಬರ್ 19ರಂದು ವಿಶ್ಯಾದ್ಯಂತ ಬಿಡುಗಡೆ ಆಗಲಿದೆ.
Posted by: VS | Source: Online Desk

ಈ ವಿಭಾಗದ ಇತರ ಸುದ್ದಿ