ಅಜ್ಜಿ ಹೇಳಿದ ಮನೆಮದ್ದು ನಟಿ ಯಾಮಿ ಗೌತಮ್ ಸೌಂದರ್ಯದ ಗುಟ್ಟು!

Published: 04 Sep 2018 05:01 PM IST | Updated: 04 Sep 2018 07:57 PM IST
ಅಜ್ಜಿ ಹೇಳಿದ ಮನೆಮದ್ದೇ ನಟಿ ಯಾಮಿ ಗೌತಮ್ ಸೌಂದರ್ಯದ ಗುಟ್ಟು
ಮುಂಬೈ: ಅಜ್ಜಿ ಹೇಳಿದ್ದ ಮನೆ ಮದ್ದುಗಳೇ ನಟಿ ಯಾಮಿ ಗೌತಮ್'ರವರ ಸೌಂದರ್ಯದ ಗುಟ್ಟಂತೆ...

ಅಭಿಮಾನಿಗಳಿಗಾಗಿ ತಮ್ಮ ಸೌಂದರ್ಯದ ಗುಟ್ಟನ್ನು ಬಿಟ್ಟುಕೊಟ್ಟಿರುವ ಯಾಮಿ ಗೌತಮ್'ರವರು ಸೌಂದರ್ಯಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ. 

ಸೌಂದರ್ಯ ಹೆಚ್ಚಲು ನೈಸರ್ಗಿಕ ವಸ್ತುಗಳ ಜೊತೆಗೆ ಹೆಚ್ಚು ನೀರನ್ನು ಕುಡಿಯಬೇಕು. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಎಂದು ಯಾಮಿ ಗೌತಮ್ ಹೇಳಿದ್ದಾರೆ.

  • ಉದ್ದನೆಯ ಕಣ್ರೆಪ್ಪೆಗಾಗಿ ಹರಳೆಣ್ಣೆ, ವಿಟಮಿನ್ ಇ ಆಯಿಲ್ ಮತ್ತು ಲೋಳೆಸರವನ್ನು ಪೇಸ್ಟ್ ಮಾಡಿಕೊಂಡು ಬಳಸಬೇಕು. 
  • ಮುಖದ ಚರ್ಮ ಹೊಳೆಯಲು ತೆಂಗಿನ ಹಾಲು ಮತ್ತು ನೀರಿನೊಂದಿಗೆ ಬೆರೆಸಿ ಹಚ್ಚಬೇಕು. 
  • ಕೂದಲಿನ ಸ್ನಾನದ ಬಳಿಕ ಕಂಡಿಷನರ್, ಹೇರ್ ಜೆಲ್ ಬಳಕೆ ಮಾಡುವ ಬದಲು ಒಂದು ಬಟ್ಟಲು ವಿನೆಗರ್ ಬಳಕೆ ಮಾಡುವುದರಿಂದ ಕೂದಲು ಮೃದುವಾಗಿರುತ್ತದೆ. 
  • ತುಟಿಗಳ ಆರೈಕೆಗೆ ಅತ್ಯುತ್ತಮವಾದ ವಸ್ತುವೆಂದರೆ ತುಪ್ಪ. ಒಣಗಿದ ತುಟಿಗಳಿಂದ ದೂರವಿರಬೇಕಾದರೆ ಆಗಾಗ ತುಪ್ಪವನ್ನು ಹಚ್ಚಬೇಕು. 
  • ಅರ್ಧ ಚಮಚ ಅರಿಶಿನದ ಪುಡಿಯೊಂದಿಗೆ ಅರ್ಧ ಚಮಚ ಸಕ್ಕರೆ ಹಾಗೂ ಜೇನುತುಪ್ಪವನ್ನು ಬೆರೆಸಿ ಸ್ಕ್ರಬ್ ರೀತಿ ಬಳಕೆ ಮಾಡಬಹುದು. ಸ್ಕ್ರಬ್ ಬಳಿಕ ಟವಲ್ ನಲ್ಲಿ ಐಸ್ ಕ್ಯೂಬ್ ಗಳನ್ನು ಹಾಕಿ ಮುಖವನ್ನು ಒರೆಸಿದರೆ, ಆರೋಗ್ಯಕರ ಚರ್ಮ ನಿಮ್ಮದಾಗುತ್ತದೆ. 
Posted by: MVN | Source: IANS

ಈ ವಿಭಾಗದ ಇತರ ಸುದ್ದಿ