ಅಕ್ಷಯ್ ಹುಟ್ಟುಹಬ್ಬದಂದೆ 2.0 ಪೋಸ್ಟರ್ ರಿಲೀಸ್, ಅಕ್ಷಯ್ ಲುಕ್‌ಗೆ ಅಭಿಮಾನಿಗಳು ಫಿದಾ!

Published: 09 Sep 2018 06:36 PM IST
ಅಕ್ಷಯ್ ಕುಮಾರ್
ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 51ರ ಹರಯಕ್ಕೆ ಕಾಲಿಟ್ಟಿದ್ದು ಈ ಸಂಭ್ರಮ ದಿನದಂದೆ 2.0 ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಸೈನ್ಸ್ -ಫಿಕ್ಷನ್ 2.0 ಚಿತ್ರದಲ್ಲಿ ಅಕ್ಷಯ್ ಕುಮಾರ್ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿದ್ದಾರೆ. 

ತಮ್ಮ ಪೋಸ್ಟರ್ ಬಿಡುಗಡೆ ಕುರಿತಂತೆ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್ ನನ್ನ ಅಭಿಮಾನಿಗಳಿಗೆ ಇದು ನನ್ನ ಹುಟ್ಟುಹಬ್ಬದ ವಿಶೇಷ ಟ್ರಿಟ್. ಚಿತ್ರದಲ್ಲಿನ ನನ್ನ ಪವರ್ ಫುಲ್ ಪಾತ್ರದ ಕುರಿತಂತೆ ನಿಮ್ಮ ಬಳಿ ಹಂಚಿಕೊಳ್ಳುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಈ ಚಿತ್ರದ ಪಾತ್ರ ವೃತ್ತಿ ಜೀವನದ ಬಹುಮುಖ್ಯ ಪಾತ್ರವಾಗಲಿದೆ ಎಂದು ಬರೆದುಕೊಂಡಿದ್ದಾರೆ. 

ಈ ಭೂಮಿ ಬರೀ ಮನುಷ್ಯರಿಗೆ ಮಾತ್ರ ಸೇರಿದಲ್ಲ. ಯಾರಿಗೆ ಇಲ್ಲಿ ಮಾತನಾಡಲು ಅವಕಾಶವಿಲ್ಲ ಅವರ ಪರವಾಗಿ ನಾನು ಸೂಪರ್ ಹೀರೋ ಆಗಲಿದ್ದಾರೆ. ಚಿತ್ರದಲ್ಲಿ ನನ್ನ ಪಾತ್ರ ಭಯಾನಕತೆಯನ್ನು ಸೃಷ್ಟಿಸಲಿದೆ. 
Posted by: VS | Source: IANS

ಈ ವಿಭಾಗದ ಇತರ ಸುದ್ದಿ