ಟೀಂ ಇಂಡಿಯಾ ಕ್ರಿಕೆಟಿಗ ಬಿಗ್‌ಬಾಸ್ ರಿಯಾಲಿಟಿ ಶೋಗೆ ಎಂಟ್ರಿ, ಅದು ಯಾರು ಗೊತ್ತ!

Published: 05 Sep 2018 10:39 PM IST
ಟೀಂ ಇಂಡಿಯಾ
ಕ್ರಿಕೆಟ್ ನಿಂದ ನಿಷೇಧಗೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ಬಿಗ್ ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಡುತ್ತಿದ್ದಾರೆ. 

ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ರಿಯಾಲಿಟಿ ಶೋ ಬಿಗ್‌ಬಾಸ್ ಇದೇ ಸೆಪ್ಟೆಂಬರ್ 16ರಿಂದ ಆರಂಭಗೊಳ್ಳುತ್ತಿದ್ದು ಈ ಶೋಗೆ ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್ ಭಾಗವಹಿಸಲಿದ್ದಾರೆ. 

12ನೇ ಆವೃತ್ತಿಯ ಬಿಗ್ ಬಾಸ್ ರಿಯಾಲಿಟಿ ಶೋಗೆ ಈ ಬಾರಿ ಹಲವು ಸೆಲೆಬ್ರೆಟಿಗಳು ಎಂಟ್ರಿ ಕೊಡಲಿದ್ದಾರೆ. 

2005ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಶ್ರೀಶಾಂತ್ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದರು. ಶ್ರೀಶಾಂತ್ ಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದ್ದರೂ ಬಿಸಿಸಿಐ ಮಾತ್ರ ಅಜೀವ ನಿಷೇಧವನ್ನು ತೆರವುಗೊಳಿಸಿಲ್ಲ. 

ಶ್ರೀಶಾಂತ್ ಜೈಲಿನಿಂದ ಹೊರಬಂದ ಬಳಿಕ ಸಿನಿಮಾ, ಡ್ಯಾನ್ಸ್ ಮತ್ತು ರಾಜಕೀಯ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ಅಗ್ನಿಪರೀಕ್ಷೆ ನಡೆಸಿದ್ದಾರೆ. 
Posted by: VS | Source: Online Desk

ಈ ವಿಭಾಗದ ಇತರ ಸುದ್ದಿ