ಮದುವೆ ಬಗ್ಗೆ ಕೇಳಿದ ಪತ್ರಕರ್ತನಿಗೆ ದೀಪಿಕಾ ಪಡುಕೋಣೆ ಕೊಟ್ಟ ತಪರಾಕಿ ಏನು?

Published: 10 Sep 2018 05:03 PM IST | Updated: 10 Sep 2018 06:31 PM IST
ದೀಪಿಕಾ ಪಡುಕೋಣೆ
ಮುಂಬೈ: ಬಾಲಿವುಡ್ ನ ಹಾಟ್ ಫೆವರಿಟ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ಆಗುವುದು ಯಾವಾಗ ಎನ್ನುವ ಕುರಿತಂತೆ ಇತ್ತೀಚಿನ ದಿನಗಳಲ್ಲಿ ವದಂತಿಗಳು ಹರಿದಾಡುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಮಹಿಳೆಯ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ನಟಿಯನ್ನು ಪತ್ರಕರ್ತನೊಬ್ಬ ಆಕೆಯ ಮದುವೆ ಬಗೆಗೆ ಕೇಳಿದಾಗ ದೀಪಿಕಾ ಇದ್ದಕ್ಕಿದ್ದಂತೆ ಆತನ ಮೇಲೆ ಹರಿಹಾಯ್ದಿದ್ದಾರೆ.

"ನನ್ನ ಮದುವೆ ಕುರಿತು ನೀವು ಕೇಳುವ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ, ಅದು ನನ್ನ ವೈಯುಕ್ತಿಕ ವಿಚಾರ. ಇಂತಹಾ ಕಾರ್ಯಕ್ರಮದಲ್ಲಿ ಏನು ಪ್ರಶ್ನೆ ಕೇಳಬೇಕಿತ್ತೋ ಅದನ್ನು ಕೇಳಿ" ದೀಪಿಕಾ ಗಟ್ಟಿಯಾಗಿ ಉತ್ತರಿಸಿದ್ದಾರೆ. 

ವರದಿಗಳ ಪ್ರಕಾರ, ಈ ವರ್ಷ ನವೆಂಬರ್ 10 ರಂದು ಇಟಲಿಯ ಲೇಕ್ ಕೊಮೊದಲ್ಲಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗಿದ್ದು ಕೇವಲ 30 ಗಣ್ಯ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ.

ವಿಶೇಷ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ದೀಪಿಕಾ ಮಹಿಳೆಯರ ಖಿನ್ನತೆ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ. ಮಹಿಳೆಯರಿಗೆ ಸಾಕಷ್ಟು ಖಿನ್ನತೆ ಕಾಡುತ್ತದೆ, ಅವರು ಎಂದೂ ಇನ್ನೊಬ್ಬರ ಕುರಿತೇ ಹೆಚ್ಚಾಗಿ ಯೋಚಿಸುತ್ತಾರೆ. ಶಪಿಂಗ್, ಬ್ಯೂಟಿ ಪಾರ್ಲರ್ ಹೀಗೆ ಎಲ್ಲೇ ಹೋದರೆ ಸಹ ಮನೆ, ಮಕ್ಕಳು, ಪತಿ ಹೀಗೆ ಇನ್ನೊಬ್ಬರ ವಿಚಾರವನ್ನೇ ಯೋಚಿಸುತ್ತಾರೆ. ಅವರಿಗೂ ಸ್ವಲ್ಪ ಸಮಯಾವಕಾಶ ಬೇಕು, ಅವರು ಅವರ ಬಗೆಗೆ ಯೋಚಿಸಲು ಕೆಲ ಕ್ಷಣಗಳು ಅಗತ್ಯವಿದೆ ಎಂದು ನಟಿ ಹೇಳಿದ್ದಾರೆ.
Posted by: RHN | Source: Online Desk

ಈ ವಿಭಾಗದ ಇತರ ಸುದ್ದಿ