ಬೆಂಗಳೂರು ನಗರದಲ್ಲಿ ನಟಿ ದೀಪಿಕಾ ವಿವಾಹ ಪೂಜೆ?

Published: 25 Aug 2018 03:48 PM IST
ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್
ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಅವರು ನವೆಂಬರ್ 20ಕ್ಕೆ ಹಸೆಮಣೆ ಏರಲಿದ್ದಾರೆಂಬ ವರದಿಗಳ ಬೆನ್ನಲ್ಲೇ, ಅವರ ವಿವಾಹಕ್ಕೆ 10 ದಿನ ಬಾಕಿಯಿರುವಾಗ ಬೆಂಗಳೂರು ನಗರದಲ್ಲಿ ವಿವಾಹ ಪೂಜೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. 

ಬೆಂಗಳೂರಿನಲ್ಲಿರುವ ದೀಪಿಕಾ ಅವರ ನಿವಾಸದಲ್ಲಿ ವಿಶೇಷ ನಂದಿ ಪೂಜೆ ಹಮ್ಮಿಕೊಳ್ಳಲಾಗುತ್ತದೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ. 

ಇದಲ್ಲದೆ, ನಂದಿ ಪೂಜೆ ಹಮ್ಮಿಕೊಳ್ಳುವ ಕುರಿತಂತೆ ದೀಪಿಕಾ ಪಡುಕೋಣೆ ಅವರ ತಾಯಿ ಉಜ್ವಲಾ ಪಡುಕೋಣೆ ಅವರು ನಂದಿ ದೇವಸ್ಥಾನದ ಅರ್ಚಕರ ಜೊತೆಗೆ ಮಾತುಕತೆ ನಡೆಸಿದ್ದಾರೆಂದು ಬಾಲಿವುಡ್ ಕುರಿತ ಸುದ್ದಿಗಳನ್ನು ಪ್ರಕಟಿಸುವ ವೆಬ್'ಸೈಟ್ ವೊಂದು ವರದಿ ಮಾಡಿದೆ. ಇನ್ನು ದೀಪಿಕಾ ಅವರ ವಿವಾರ ಲೇಕ್ ಕೊಮೊ ಎಂಬರಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. 
Posted by: MVN | Source: Online Desk

ಈ ವಿಭಾಗದ ಇತರ ಸುದ್ದಿ