ಬಾಲಿವುಡ್ ಗಾಯಕ ಕುಮಾರ್ ಸಾನು ವಿರುದ್ಧ ಎಫ್ಐಆರ್

Published: 04 Sep 2018 06:29 PM IST
FIR against Bollywood singer Kumar Sanu for singing till late hours
ತಡರಾತ್ರಿ ವರೆಗೂ ಹಾಡಿದ್ದಕ್ಕಾಗಿ ಬಾಲಿವುಡ್ ಗಾಯಕ ಕುಮಾರ್ ಸಾನು ವಿರುದ್ಧ ಎಫ್ಐಆರ್ ದಾಖಲಾಗಿದೆ. 

ಬಿಹಾರದ ಮುಜಾಫರ್ ಪುರದ ಶಾಲೆಯ ಕಾರ್ಯಕ್ರಮವೊಂದರಲ್ಲಿ ಕುಮಾರ್ ಸಾನು ತಡರಾತ್ರಿ ವರೆಗೂ ಕಾರ್ಯಕ್ರಮ ನೀಡಿದ್ದರು. ಕಾರ್ಯಕ್ರಮದಲ್ಲಿ ಕುಮಾರ್ ಸಾನು ಬೆಳಿಗಜಾವದ ವರೆಗೂ ಹಾಡಿದ್ದ ಏಕ್ ಲಡ್ಕಿ ಕೋ ದೇಖಾ ತೋ... ತುಜೆ ದೇಖಾ ತೋ ಯೆ ಜಾನಾ ಸನಮ್ ಸೇರಿದಂತೆ ಹಲವು ಹಾಡುಗಳು ನೆರೆಹೊರೆಯವರ ನಿದ್ದೆ ಕೆಡಿಸಿತ್ತು. 

ನಿಯಮಗಳನ್ನು ಉಲ್ಲಂಘಿಸಿ ತಡರಾತ್ರಿವರೆಗೂ ಗಾಯನ ಕಾರ್ಯಕ್ರಮ ಆಯೋಜಿಸಿದ್ದರ ವಿರುದ್ಧ ಶಾಲೆಯ ಬಳಿ ಇರುವ ಸ್ಥಳೀಯರು ದೂರು ದಾಖಲಿಸಿದ್ದರು. ಇಂಡಿಯಾ ಟುಡೆ ವರದಿಯ ಪ್ರಕಾರ ಕುಮಾರ್ ಸಾನು ಹಾಗೂ ಕಾರ್ಯಕ್ರಮ ಆಯೋಜಿಸಿದ್ದ ಅಂಕಿತ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. 
Posted by: SBV | Source: Online Desk

ಈ ವಿಭಾಗದ ಇತರ ಸುದ್ದಿ