ಭಾರತಕ್ಕೆ ಸಂಬಂಧಿಸಿದ ಶ್ರೇಷ್ಠ ಚಿತ್ರಗಳನ್ನು ವಿದೇಶಿಗರು ಮಾತ್ರ ನಿರ್ಮಿಸುತ್ತಾರೆ: ಅನುಪಮ್ ಖೇರ್

Published: 11 Sep 2018 03:02 PM IST | Updated: 11 Sep 2018 03:08 PM IST
ಅನುಪಮ್ ಖೇರ್
ಟೊರಾಂಟೋ: ವಿದೇಶೀಯರು ಮಾತ್ರ ಭಾರತಕ್ಕೆ ಸಂಬಂಧಿಸಿದ  ಶ್ರೇಷ್ಠ ಚಲನಚಿತ್ರಗಳನ್ನು ತಯಾರಿಸುತ್ತಿದ್ದಾರೆ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 2008 ರ ಭಯೋತ್ಪಾದಕ ದಾಳಿ ಆಧಾರದ ಮೇಲೆ ಆಸ್ಟ್ರೇಲಿಯಾದ ನಿರ್ದೇಶಕ ಆಂಥೋನಿ ಮರಾಸ್ ನಿರ್ದೇಶನದ ಚೊಚ್ಚಲ ಚಿತ್ರ "ಹೋಟೆಲ್ ಮುಂಬೈ" ವಿಶೇಷ ಪ್ರದರ್ಶನಕ್ಕಾಗಿ ಟೊರೆಂಟೋಗೆ ಆಗಮಿಸಿದ್ದ ಖೇರ್ ಈ ಅಭಿಪ್ರಾಯ  ವ್ಯಕ್ತಪಡಿಸಿದ್ದಾರೆ. " ಹಿಂದೆ ’ಗಾಂಧಿ’ ಚಿತ್ರವನ್ನು ಸಹ ವಿದೇಶೀಯರೇ ನಿರ್ಮಾಣ ಮಾಡಿದ್ದರು, ಈಗ "ಹೋಟೆಲ್ ಮುಂಬೈ" ಸಹ ವಿದೇಶೀಯರಿಂದ ತಯಾರಾಗಿದೆ. ಚಿತ್ರ ನಿರ್ದೇಶನ ಅಂಥೋನಿಗೆ ಧನ್ಯವಾದಗಳು. ಈ ಚಿತ್ರ ಮುಂಬೈ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗಾಗಿ ಸಮರ್ಪಿತವಾಗಿದೆ" ಅವರು ಹೇ:ಳಿದರು.

"ಹಿಂದೊಮ್ಮೆ ಓರ್ವ ವ್ಯಕ್ತಿ ಮುಂಬೈ ದಾಳಿ ವಿಷಯವನ್ನೇ ವಸ್ತುವಾಗಿಟ್ಟುಕೊಂಡು ಚಿತ್ರ ನಿರ್ಮಿಸಿದ್ದರು,  ಅದು ಅತ್ಯಂತ ಕೆಟ್ಟದಾಗಿ ಬಂದಿತ್ತು. ಆ ವ್ಯಕ್ತಿ ದುರಂತ ಘಟನೆಯನ್ನು ಹಣ ಸಂಪಾದನೆಗಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದರು" ಖೇರ್ ಯಾರೊಬ್ಬ ವ್ಯಕ್ತಿಯ ಹೆಸರನ್ನು ಸೂಚಿಸದೆ ಹೇಳಿದ್ದಾರೆ.

"ಅಂಥೋನಿಯವರ ಚಿತ್ರ ಹತ್ತು ವರ್ಷಗಳ ಹಿಂದೆ ಘಟಿಸಿದ್ದ ದುರಂತವನ್ನು ಮಾನವೀಯ ಹಿನ್ನೆಲೆಯಿಂದ ತೋರಿಸುತ್ತದೆ ಎಂದು ನಟ ವಿವರಿಸಿದ್ದಾರೆ.

ಹೋಟೆಲ್ ತಾಜ್ ಪ್ಯಾಲೆಸ್ ನಂತಹಾ ಮತ್ತೊಂದು ಹೋಟೆಲ್ ಇರಲು ಸಾಧ್ಯವಿಲ್ಲ, ಇದೊಂದು ಐಕಾನ್ ಆಗಿದೆ.ಅದರ ಮಾಲೀಕ - ಟಾಟಾ ಭಾರತದಲ್ಲಷ್ಟೇ ಅಲ್ಲದೆ  ವಿಶ್ವದಾದ್ಯಂತವೂ ಗೌರವಾನ್ವಿತ ಹೆಸರನ್ನು ಗಳಿಸಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ, "ಹೋಟೆಲ್ ಮುಂಬೈ" ತನ್ನ ವೃತ್ತಿಜೀವನದ 501 ನೇ ಚಿತ್ರ ಎಂದು ಖೇರ್ ಬಹಿರಂಗಪಡಿಸಿದ್ದಾರೆ. "ಹೋಟೆಲ್ ಮುಂಬೈ" ಚಿತ್ರದಲ್ಲಿನ ಖೇರ್ ಪಾತ್ರವನ್ನು ಕಂಡ ಅವರ ತಾಯಿ ಸಹ ಅವರೆಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದರೆಂದು ಕೇಳಿದ್ದರು, ಆ ಮೂಲಕ್ ಅಮಗನ ನಟನೆಯನ್ನು ಮೆಚ್ಚಿಕೊಂಡು ಅವರನ್ನು  ಅಭಿನಂದಿಸಿದ್ದರು. 

ಈ ಚಲನಚಿತ್ರ ಸೆಪ್ಟೆಂಬರ್ 7 ರಂದು ನಡೆದ  ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಥಮ ಪ್ರದರ್ಶನ ಕಂಡಿದೆ.
Posted by: RHN | Source: The New Indian Express

ಈ ವಿಭಾಗದ ಇತರ ಸುದ್ದಿ