ಲ್ಯಾಕ್ಮಿ ಫ್ಯಾಷನ್ ವೀಕ್' ಶೋ: ಯಾವಾಗಲೂ ಸ್ವೀಕರಿಸುವ ಭರವಸೆಯಲ್ಲಿರುತ್ತೇನೆ - ಕಂಗನಾ

Published: 26 Aug 2018 01:37 PM IST | Updated: 26 Aug 2018 01:39 PM IST
ಕಂಗನಾ ರಣಾವತ್
ಮುಂಬೈ: ಇಲ್ಲಿ ನಡೆಯುತ್ತಿರುವ 'ಲ್ಯಾಕ್ಮಿ ಫ್ಯಾಷನ್ ವೀಕ್'  ಶೋನಲ್ಲಿ  ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್  ಶೋ ಸ್ಟಾಪರ್ ಆಗಿ ರಾಂಪ್ ವಾಕ್ ಮಾಡಿದ್ದಾರೆ.

ಆಕೆಯ ಆರಂಭದ ದಿನಗಳಲ್ಲಿ ಮಾಡೆಲ್ ಗಳನ್ನು ಅನುಕರಣೆ ಮಾಡುತ್ತಿದ್ದರಂತೆ. ಅಲ್ಲದೇ, ಶೋನಲ್ಲಿ ಅವರನ್ನು ಸ್ಪೀಕರಿಸುವ ಭರವಸೆ ಯಾವಾಗಲೂ ಇರುತಿತ್ತೆಂದು ಕಂಗನಾ ಹೇಳಿದ್ದಾರೆ.

ಹದಿಹರೆಯದ ಸಂದರ್ಭದಲ್ಲಿ ನನ್ನಗೆ ಯಾವ ಬಗ್ಗೆಯೂ ಖಚಿತತೆ ಇರಲಿಲ್ಲ. ಆದರೆ, ನನ್ನನ್ನು ಒಪ್ಪಿಕೊಳ್ಳುವ ವಿಶ್ವಾಸವಿತ್ತು. ರಾತ್ರಿ ವೇಳೆಯಲ್ಲಿ ರಿಹರ್ಸಲ್ ಮಾಡಿದ್ದೇನೆ. ವಿಜ್ಞಾನ ವಿದ್ಯಾರ್ಥಿಯಾಗಿದ್ದು, ಶ್ರಮವಹಿಸಿ ಕೆಲಸ ಮಾಡುವುದಾಗಿ ಕಂಗನಾ ಹೇಳುತ್ತಾರೆ.

 ರಾತ್ರಿಯಲ್ಲಿ ಎಚ್ಚರಗೊಂಡು ಹೀಲ್ಸ್ ಅನ್ನು ಧರಿಸುತ್ತಿದ್ದೆ  ಮತ್ತು ಫ್ಯಾಷನ್ ಟಿವಿಯಲ್ಲಿ  ನೋಡಿದ ಕ್ಯಾಟ್ ವಾಕ್  ಅನುಕರಣೆ ಮಾಡುತಿದ್ದೆ.  ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾಗಿ ಅವರು ನೆನಪು ಮಾಡಿಕೊಂಡರು.

ಪ್ರತಿಬಾರಿ ರಾಂಪ್ ವಾಕ್ ಮಾಡುವಾಗ ಮಧುರ್ ಭಂಡರ್ಕರ್ ನಿರ್ದೇಶಿಸಿದ ಪ್ಯಾಶನ್   ಶೋ ನೆನಪು ಮಾಡಿಕೊಳ್ಳುವುದಾಗಿ ಹೇಳುವ 31 ವರ್ಷದ ನಟಿ, ಮಾಡಲಿಂಗ್  ಕ್ಷೇತ್ರದಿಂದ ಬಂದಿಲ್ಲದ ಕಾರಣ ರಿಹರ್ಸಲ್ ಮಾಡುತ್ತೇನೆ ಎಂದು ಕಂಗನಾ ಹೇಳಿದ್ದಾರೆ.

ವಿನ್ಯಾಸಕರಾದ ಪಂಕಜ್ ಮತ್ತು ನಿಧಿ ಅವರಿಗೆ ನೊಕಿಯೋ  ಶನಿವಾರ ಆಯೋಜಿಸಿದ್ದ ಪ್ಯಾಶನ್ ಶೋ ಕಾರ್ಯಕ್ರಮದಲ್ಲಿ  ಕಂಗನಾ ರಾಂಪ್ ವಾಕ್ ಮಾಡಿದರು.  ಕೋಬಾಲ್ಟ್ ನೀಲಿ ಬಣ್ಣದ ಉಡುಪು ಧರಿಸಿ  ಕಂಗನಾ ಮಿಂಚಿದರು.

ಎಲ್ಲ ಪ್ರಶಂಸೆಗಳು ಪಂಕಜ್ ಹಾಗೂ ನಿಧಿ ಅವರಿಗೆ ಸಲ್ಲಬೇಕು, ಕೂದಲು ವಿನ್ಯಾಸ, ಮೇಕಪ್  ಸೇರಿದಂತೆ ಎಲ್ಲ ವಿನ್ಯಾಸವನ್ನು  ಅವರ ನೇತೃತ್ವದಲ್ಲಿನ ತಂಡ ನಿರ್ವಹಿಸಿತ್ತು. ಪಂಕಜ್ ಹಾಗೂ ನಿಧಿ ವಿನ್ಯಾಸದ ಉಡುಪು ರಾಂಪ್ ವಾಕ್ ಮಾತ್ರವಲ್ಲದೆ ಇತ್ತರಡೆಯೂ ಧರಿಸಲು ಹಿತಕರವೆನಿಸಿತ್ತು ಎಂದು ಕಂಗನಾ ಹೇಳುತ್ತಾರೆ.

Posted by: ABN | Source: The New Indian Express

ಈ ವಿಭಾಗದ ಇತರ ಸುದ್ದಿ