'ಜಲೇಬಿ'ಯ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ಮಹೇಶ್ ಭಟ್

Published: 04 Sep 2018 11:40 AM IST
ಮಹೇಶ್ ಭಟ್
ನವದೆಹಲಿ: ಬಾಲಿವುಡ್ ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಮಹೇಶ್ ಭಟ್ ತಮ್ಮ ಮುಂದಿನ ಚಿತ್ರವಾದ ಜಿಲೇಬಿಯ ಪೋಸ್ಟರ್ ನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ನಲ್ಲಿ 'ಮೇರೆ ಡ್ಯಾಡ್ ಕಿ ಮಾರುತಿ' ಖ್ಯಾತಿಯ ರಿಯಾ ಚಕ್ರವರ್ತಿ ರೈಲಿನ ಕಿಟಕಿಯ ಹೊರಗೆ ಮೈ ಚಾಚಿಕೊಂಡು ನಟ ವರುಣ್ ಮಿತ್ರಾಗೆ ಚುಂಬನ ನೀಡುತ್ತಿರುವ ಫೋಟೋವಿದೆ.

ಈ ಫೋಟೋವನ್ನು ಮಹೇಶ್ ಭಟ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದು ಅದರ ಕೆಳಗೆ, ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ಹಳೆ ಕಥೆಗಳು ಹಳಸಿ ಹೋಗಿದ್ದು ಮತ್ತು ಯಾವ ಹೊಸ ಹೊಸ ಪ್ರೀತಿ, ಪ್ರೇಮದ ಕಥೆಗಳು ಅದರ ಜಾಗಕ್ಕೆ ಬಂದಿರಲಿಲ್ಲ. ಅದಕ್ಕಾಗಿ ಚಿತ್ರಪ್ರೇಮಿಗಳಿಗಿದು, ಜಿಲೇಬಿ ಪೋಸ್ಟರ್ ಎಂದು ಬರೆದಿದ್ದಾರೆ.

ಚೊಚ್ಚಲ ನಿರ್ದೇಶಕ ಪುಷ್ಪದೀಪ್ ಭಾರದ್ವಾಜ್ ನಿರ್ದೇಶನದ ಮಹೇಶ್ ಭಟ್ ನಿರ್ಮಾಣದ ಈ ಚಿತ್ರ ಅಕ್ಟೋಬರ್ 12ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

Posted by: SUD | Source: AFP

ಈ ವಿಭಾಗದ ಇತರ ಸುದ್ದಿ