ಮಣಿಕರ್ನಿಕ: ಯುದ್ಧಕ್ಕೆ ಸಿದ್ಧವಾದ ಕಂಗನಾ ರಣಾವತ್

Published: 08 Sep 2018 07:29 PM IST | Updated: 08 Sep 2018 07:32 PM IST
ಕಂಗನಾ ರಣಾವತ್
ನವದೆಹಲಿ: ಬಾಲಿವುಡ್ ಪ್ರತಿಭಾವಂತ ನಟಿ ಕಂಗನಾ ರಣಾವತ್ ಅವರು ತಮ್ಮ ಮುಂದಿನ ಚಿತ್ರ 'ಮಣಿಕರ್ನಿಕ: ದಿ ಕ್ವೀನ್ ಆಫ್ ಝಾನ್ಸಿ'ಯ ಹೊಸ ಸ್ಟಿಲ್ ವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಯುದ್ಧಕ್ಕೆ ಸಿದ್ಧವಾಗಿದ್ದಾರೆ.

ಕಂಗನಾ ಅವರು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಕುರಿತ ಐತಿಹಾಸಿಕ ಚಿತ್ರದ ತೆರೆಯೆ ಹಿಂದೆ ನಡೆಯುತ್ತಿರುವ ಕಸರತ್ತಿಗೆ ಸಂಬಂಧಿಸಿದ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಕಂಗನಾ ಹೋರಾಟಗಾರ್ತಿಯ ಉಡುಪು ಧರಿಸಿದ್ದು, ಮುಖದಲ್ಲಿ ರಕ್ತದ ಕಲೆಗಳಿವೆ. ಹಾಲಿವುಡ್ ಆ್ಯಕ್ಷನ್ ನಿರ್ದೇಶಕ ನಿಕ್ ಪೊವೆಲ್ ಅವರು ಕಂಗನಾಗೆ ನಿರ್ದೇಶನ ಮಾಡುತ್ತಿದ್ದಾರೆ.

ವಾರಿಯರ್ ಕ್ವೀನ್ ಯುದ್ಧಕ್ಕೆ ಸಿದ್ಧವಾಗಿದ್ದಾಳೆ ಎಂದು ಕಂಗನಾ ರಣಾವತ್ ಅವರು ಟ್ವೀಟ್ ಮಾಡಿದ್ದಾರೆ. 

ಕಂಗನಾ ರಣಾವತ್​ ಅಭಿನಯದಲ್ಲಿ ಮೂಡಿಬರುತ್ತಿರುವ ಐತಿಹಾಸಿಕ ಮಣಿಕರ್ನಿಕ ಚಿತ್ರ ಈ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆ ಮಾಡುವುದಕ್ಕೆ ಬಾಹ್ಮಣ ಸಮುದಾಯವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈಗ ಚಿತ್ರ ಜನವರಿ 25, 2019ರಲ್ಲಿ ತೆರೆ ಕಾಣಲಿದೆ. ಚಿತ್ರದಲ್ಲಿ ನಟಿ ಕಂಗನಾ ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 19ನೇ ಶತಮಾನದ ಐತಿಹಾಸಿ ಕಥೆ ಇದಾಗಿದೆ.

Posted by: LSB | Source: ANI

ಈ ವಿಭಾಗದ ಇತರ ಸುದ್ದಿ