ಬಾಲಿವುಡ್ ಗೆ ವಿಶ್ವ ಸುಂದರಿ ಮನುಷಿ ಚಿಲ್ಲರ್ ಎಂಟ್ರಿ?

Published: 04 Sep 2018 11:17 AM IST
ಕರಣ್ ಜೋಹರ್ , ಮನುಷಿ ಚಿಲ್ಲರ್(ಸಂಗ್ರಹ ಚಿತ್ರ)
ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅನೇಕ ನಟರ ಮಕ್ಕಳನ್ನು ತೆರೆಮೇಲೆ ಪರಿಚಯಿಸಿದವರು. ಅಲಿಯಾ ಭಟ್ ನಿಂದ ಜಾಹ್ನವಿ ಕಪೂರ್ ವರೆಗೆ ಅನೇಕ ನಟಿಯರು ಕರಣ್ ಜೋಹರ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದವರು.

ಇತ್ತೀಚೆಗೆ ಬಿ-ಟೌನ್ ನಲ್ಲಿ ಹರಿದಾಡುತ್ತಿರುವ ವರದಿ ಪ್ರಕಾರ ಕಳೆದ ವರ್ಷದ ಮಿಸ್ ವರ್ಲ್ಡ್ ಮನುಷಿ ಚಿಲ್ಲರ್ ಕೂಡ ಇದೇ ಸಾಲಿಗೆ ಸೇರುತ್ತಾರೆ. ನಿರ್ದೇಶಕ ಕರಣ್ ಜೋಹರ್ ಮನುಷಿಯವರನ್ನು ಬಾಲಿವುಡ್ ಗೆ ಪರಿಚಯಿಸಲು ಉತ್ಸುಕವಾಗಿದ್ದು 2019ರಲ್ಲಿ ಸಿನಿಮಾ ಆರಂಭವಾಗಲಿದೆ ಎನ್ನಲಾಗುತ್ತಿದೆ.

ಈ ದಿಸೆಯಲ್ಲಿ ಮನುಷಿ ಚಿಲ್ಲರ್ ಈಗಾಗಲೇ ಫೋಟೋಶೂಟ್ ಮಾಡಿಸಿಕೊಂಡಿದ್ದು ಧರ್ಮ ಪ್ರೊಡಕ್ಷನ್ ಗೆ ಲುಕ್ ಟೆಸ್ಟ್ ಕೂಡ ಮಾಡಿಸಿಕೊಂಡಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಮನುಷಿ ಚಿಲ್ಲರ್ ಬಾಲಿವುಡ್ ನಲ್ಲಿ ನಟಿಸಲು ಆಸಕ್ತಿಯಿರುವುದಾಗಿ ಹೇಳಿಕೊಂಡಿದ್ದರು ಮತ್ತು ಜಾಹಿರಾತುವೊಂದರಲ್ಲಿ ನಟ ರಣವೀರ್ ಸಿಂಗ್ ಜೊತೆ ಅಭಿನಯಿಸಿದ್ದಾರೆ.

Posted by: SUD | Source: Online Desk

ಈ ವಿಭಾಗದ ಇತರ ಸುದ್ದಿ