ಸಲ್ಮಾನ್ ಕೌನ್ ಬನೇಗಾ ಕರೋಡ್ ಪತಿ ನಿರೂಪಕನಾಗುವುದಾದರೆ ಸ್ವಾಗತ: ಅಮಿತಾಭ್ ಬಚ್ಚನ್

Published: 29 Aug 2018 02:48 PM IST
ಸಲ್ಮಾನ್ ಖಾನ್ ಮತ್ತು ಅಮಿತಾಬ್ ಬಚ್ಚನ್
ಮುಂಬೈ: ಹಿಂದಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ "ಕೌನ್ ಬನೇಗಾ ಕರೋಡ್ ಪತಿ" 10ನೇ ಆವೃತ್ತಿಗೆ ಸಲ್ಮಾನ್ ಖಾನ್ ನಿರೂಪಕನಾಗುವುದಾದರೆ ನನ್ನ ಸ್ವಾಗತವಿದೆ ಎಂದಿ ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ರಿಯಾಲಿಟಿ ಶೋ 10ನೇ ಆವೃತ್ತಿಯು ಇದೇ ಸೆಪ್ಟೆಂಬರ್‌ 3ರಿಂದ ಪ್ರಸಾರವಾಗಲಿದ್ದು ಸಲ್ಮಾನ್ ಖಾನ್ 'ದಸ್‌ ಕಾ ದಮ್‌’ ಕಾರ್ಯಕ್ರಮದಲ್ಲಿ ಕೌನ್ ಬನೇಗಾ....ಕಾರ್ಯಕ್ರಮ ನಿರೂಪಣೆ ಮಾಡುವ ಬಯಕೆ ವ್ಯಕ್ತಪಡಿಸಿದ್ದರು. 

ರಿಯಾಲಿಟಿ ಶೋ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅಮಿತಾಬ್ ಅವರನ್ನು ಈ ಸಂಬಂಧ ಪ್ರಶ್ನಿಸಲಾಗಿ ಅವರು "ಭಾರತ್" ನಾಯಕನನ್ನು ಈ ಕಾರ್ಯಕ್ರಮ ನಿರೂಪಣೆ ಮಾಡಲು ನಾನು ಸ್ವಾಗತಿಸುತ್ತೇನೆ ಎಂದರು

"ಸಲ್ಮಾನ್ ಈ ಕಾರ್ಯಕ್ರಮದ ಅತಿಥ್ಯ ವಹಿಸುವೆನೆಂದರೆ ನನ್ನ ಸ್ವಾಗತವಿದೆ." ಎಂದು ಬಿಗ್ ಬಿ ಬಚ್ಚನ್ ಹೇಳಿದ್ದಾರೆ/

2000ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಕೌನ್ ಬನೇಗಾ ಕರೋಡ್ ಪತಿ ರಿಯಾಲಿಟಿ ಶೋ ಕಾರ್ಯಕ್ರಮ ಕಿರುತೆರೆಯಲ್ಲಿ ಹೊಸ ಕ್ರಾಂತಿಯನ್ನೇ ಹುತ್ಟು ಹಾಕಿತ್ತು. ಮೊದಲಿನ ಎರಡು ಕಂತನ್ನು ನಿರೂಪಣೆ ಮಾಡಿದ್ದ ಹಿರಿಯ ನಟ ಅಮಿತಾಬ್ ಮೂರನೇ ಕಂತಿನಲ್ಲಿ ವಯಸ್ಸಿನ ಹಿರಿತನದ ನೆಪವೊಡ್ಡಿ ಹಿಂದುಳಿದಿದ್ದರು. ಆ ಕಂತನ್ನು ಬಾಲಿವುಡ್ ನ ಇನ್ನೊಬ್ಬ ಮೇರು ನಟ ಶಾರುಖ್ ಖಾನ್ ನಡೆಸಿಕೊಟ್ಟಿದ್ದರು.

ಆದರೆ ನಾಲ್ಕನೇ ಕಂತಿನಿಂಡ ಮತ್ತೆ ನಿರೂಪಕರಾಗಿ ಬಿಗ್ ಬಿ ಅಮಿತಾಬ್ ಕಾಣಿಸಿಕೊಳ್ಳತೊಡಗಿದ್ದರು.ಇಂದಿಗೂ ಜನರಿಗೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವೆಂದ ತಕ್ಷಣ ಅಮಿತಾಬ್ ಅವರ ಚಿತ್ರವೇ ನೆನಪಿಗೆ ಬರುವಷ್ಟು ಅವರು ಮನೆಮಾತಾಗಿದ್ದಾಎ.
Posted by: RHN | Source: Online Desk

ಈ ವಿಭಾಗದ ಇತರ ಸುದ್ದಿ