ದಹಿ ಹಂಡಿ ಹೊಡೆಯುವ ಮೂಲಕ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಶಾರುಖ್ ಖಾನ್, ಶಹಬ್ಬಾಸ್ ಎಂದ ಟ್ವೀಟರಿಗರು!

Published: 03 Sep 2018 11:01 PM IST
ಶಾರುಖ್ ಖಾನ್
ಮುಂಬೈ: ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಮತ್ತು ಪುತ್ರ ಅಬ್ರಾಮ್ ಖಾನ್ ಸಮೇತ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ. 

ಮುಂಬೈನ ತಮ್ಮ ನಿವಾಸ ಮನ್ನತ್ ನಲ್ಲಿ ಶಾರುಖ್ ಖಾನ್ ಮತ್ತು ಪುತ್ರ ಅಬ್ರಾಮ್ ಖಾನ್ ದಹಿ ಹಂಡಿಯನ್ನು ಹೊಡೆದು ಅಭಿಮಾನಿಗಳಿಗೆ ಶುಭ ಕೋರಿದರು. 

ಇನ್ನು ಟ್ವೀಟರ್ ನಲ್ಲಿ ಶಾರುಖ್ ಖಾನ್ ಕೃಷ್ಣ ಜನ್ಮಾಷ್ಟಮಿ ಹಿನ್ನಲೆ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದು ಎಲ್ಲರ ಬಾಳಲ್ಲಿ ಪ್ರೀತಿ ಮತ್ತು ಸಂತೋಷ ಸದಾ ಶಾಶ್ವತವಾಗಿ ಇರಲಿ ಎಂದು ಹರಸಿದ್ದಾರೆ. 

ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಹಿಂದೂ ಹಬ್ಬಗಳನ್ನು ಆಚರಿಸುವುದು ಹೊಸದೇನಲ್ಲ. ಪ್ರತಿ ವರ್ಷ ಸಲ್ಮಾನ್ ಖಾನ್ ತಮ್ಮ ಮನೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ ವಿಸರ್ಜನೆ ಮಾಡುತ್ತಾರೆ.

#shahrukhkhan at #DahiHandi #happyjanmashtami @viralbhayani

A post shared by Viral Bhayani (@viralbhayani) on

Posted by: VS | Source: Online Desk

ಈ ವಿಭಾಗದ ಇತರ ಸುದ್ದಿ