'ಮಣಿಕರ್ಣಿಕಾ'ದಿಂದ ಹೊರಬಂದ ಸೋನು ಸೂದ್, ಪುರುಷ ಅಹಂಕಾರ ಎಂದ ಕಂಗನಾ ರಾನಾವತ್

Published: 01 Sep 2018 01:48 PM IST | Updated: 01 Sep 2018 03:04 PM IST
ಸೋನು ಸೂದ್
ಮುಂಬೈ: ನಟ ಸೋನು ಸೂದ್ ಮಣಿಕಾರ್ಣಿಕ: ದ ಕ್ವೀನ್ ಆಫ್ ಝಾನ್ಸಿ ಚಿತ್ರದಿಂದ ಹೊರಬಂದಿದ್ದಾರೆ. ಸಿಂಬಾ ಚಿತ್ರದಲ್ಲಿನ ನಟನೆಯಿಂದಾಗಿ ವೃತ್ತಿಪರ ಬದ್ಧತೆಯಿಂದಾಗಿ ಈ ಚಿತ್ರದಿಂದ ಹೊರಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಚಿತ್ರದ ನಾಯಕಿ ಕಂಗನಾ ರಾನಾವತ್ ಹೇಳುವುದು ಬೇರೆ, ಮಹಿಳಾ ನಿರ್ದೇಶಕಿಯ ಕೈಕೆಳಗೆ ಕೆಲಸ ಮಾಡಲು ಇಷ್ಟವಿಲ್ಲದ್ದರಿಂದ ಸೋನು ಸೂದ್ ಹೊರಹೋಗಿದ್ದಾರೆ ಎಂದಿದ್ದಾರೆ.

ಚಿತ್ರದ ನಿರ್ದೇಶಕ ಕೃಶ್ ಬೇರೆ ಚಿತ್ರಗಳಲ್ಲಿ ಬ್ಯುಸಿ ಇರುವುದರಿಂದ ಇದೀಗ ಸ್ವತಃ ಕಂಗನಾ ಅವರೇ ಬಾಕಿ ಇರುವ ಭಾಗದ ಚಿತ್ರೀಕರಣವನ್ನು ಮಾಡುತ್ತಿದ್ದಾರೆ. ಇಲ್ಲಿ ರಾಣಿ ಲಕ್ಷ್ಮೀಬಾಯಿಯ ಕಥೆ ಹೇಳಲಾಗುತ್ತಿದೆ.

ರೋಹಿತ್ ಶೆಟ್ಟಿ ಅವರ ಸಿಂಬಾ ಚಿತ್ರದಲ್ಲಿ ಸೋನ್ ಸೂದ್ ಅವರದ್ದು  ಪ್ರಮುಖ ಪಾತ್ರವಾಗಿದೆ. ಇದರಲ್ಲಿನ ಪಾತ್ರಕ್ಕಾಗಿ ಗಡ್ಡ ಬಿಟ್ಟಿರುವ ಅವರು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮಣಿಕಾರ್ಣಿಕದಲ್ಲಿ ಯೋಧನ ಪಾತ್ರದಲ್ಲಿ ಗಡ್ಡ ತೆಗೆದಿರುವ ಪಾತ್ರದಲ್ಲಿ ನಟಿಸಬೇಕಾಗಿತ್ತು.

ಸಿಂಬಾ ಚಿತ್ರದಲ್ಲಿನ ನೋಟದಿಂದಾಗಿ ಝಾನ್ಸಿ ಚಿತ್ರದಲ್ಲಿದ ಕಥೆಯನ್ನು ಬದಲಾಯಿಸಲು ನಿರ್ದೇಶಕರು ಮತ್ತು ನಿರ್ಮಾಪಕರು ಬಯಸಿದ್ದರು, ಆದರೆ ಅದು ಯೋಜನೆಯಂತೆ ಸಾಗಲಿಲ್ಲ.

ಆದರೆ ಈ ಬಗ್ಗೆ ಕಂಗನಾ ಸೋನು ಸೂದ್ ವಿರುದ್ಧ ಆರೋಪಿಸಿದ್ದಾರೆ. ಹೊಂದಾಣಿಕೆ ಮಾಡಿಕೊಳ್ಳಲು ಅವರು ಬೇರೆ ಸಮಯವನ್ನೇ ನೀಡಲಿಲ್ಲ ಎನ್ನುತ್ತಾರೆ.

ಅವರು ನನ್ನನ್ನು ಭೇಟಿ ಮಾಡಲು ಕೂಡ ನಿರಾಕರಿಸಿದ್ದಾರೆ. ಮಹಿಳಾ ನಿರ್ದೇಶಕಿ ಜೊತೆ ಅವರಿಗೆ ಕೆಲಸ ಮಾಡುವುದು ಇಷ್ಟವಿಲ್ಲ. ಚಿತ್ರತಂಡಕ್ಕೆ ನನ್ನ ಮೇಲೆ ಸಂಪೂರ್ಣ ನಂಬಿಕೆಯಿದ್ದರೂ ಕೂಡ ಸೋನು ಸೂದ್ ಅವರು ಬೇರೆ ದಿನ ನೀಡುತ್ತಿಲ್ಲ ಮತ್ತು ನನ್ನ ಮೇಲೆ ನಂಬಿಕೆಯನ್ನು ಕೂಡ ಇಟ್ಟುಕೊಂಡಿಲ್ಲ ಎಂದಿದ್ದಾರೆ.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಸೋನು ಸೂದ್ ಚಿತ್ರದಿಂದ ಹೊರಬರಲು ಕಾರಣ ಕಂಗನಾ ರಾನಾವತ್ ಅವರಲ್ಲಿ ವೃತ್ತಿಪರತೆ ಇಲ್ಲದಿರುವುದು ಮತ್ತು ಅವರು ಮಾಡುತ್ತಿರುವ ಸುಳ್ಳು ಆರೋಪಗಳು.

ಮಣಿಕಾರ್ಣಿಕಾ-ದ ಕ್ವೀನ್ ಆಫ್ ಝಾನ್ಸಿ ಮುಂದಿನ ವರ್ಷ ಜನವರಿ 25ರಂದು ತೆರೆಗೆ ಬರಲಿದೆ.

Posted by: SUD | Source: IANS

ಈ ವಿಭಾಗದ ಇತರ ಸುದ್ದಿ