'ಅರ್ಜುನ್ ರೆಡ್ಡಿ' ಲಿಪ್ ಲಾಕ್‌ಗೆ ಹೆದರಿ ಸಿನಿಮಾದಿಂದ ಹೊರಬಂದ ಬಾಲಿವುಡ್ ನಟಿ!

Published: 11 Sep 2018 11:51 AM IST
ತಾರಾ ಸುತಾರಿಯಾ-ಶಾಹೀದ್
ಟಾಲಿವುಡ್ ನಲ್ಲಿ ಧೂಳೆಬ್ಬಿಸಿದ್ದ ಅರ್ಜುನ್ ರೆಡ್ಡಿ ಚಿತ್ರದ ಇದೀಗ ಬಾಲಿವುಡ್ ನಲ್ಲಿ ರಿಮೇಕ್ ಆಗುತ್ತಿದ್ದು ಚಿತ್ರದಲ್ಲಿನ ಲಿಪ್ ಲಾಕ್‌ ಸೀನ್ ಬೇಡವೆಂದು ಬಾಲಿವುಡ್ ನಟಿಯೊಬ್ಬರು ಚಿತ್ರದಿಂದ ಹೊರಬಂದ್ದಾರೆ. 

ಅರ್ಜುನ್ ರೆಡ್ಡಿ ಚಿತ್ರದಲ್ಲಿನ ಕಿಸ್ಸಿಂಗ್ ಸೀನ್ ಟಾಲಿವುಡ್ ನಲ್ಲಿ ಹವಾ ಎಬ್ಬಿಸಿತ್ತು. ಇನ್ನು ಈ ಚಿತ್ರದಿಂದ ವಿಜಯ್ ದೇವರಕೊಂಡಗೆ ಇಮೇಜ್ ಹೆಚ್ಚಾಗಿತ್ತು. ಸಿನಿಮಾ ಹಕ್ಕು ಹಿಂದಿಗೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿತ್ತು. ವಿಜಯ್ ದೇವರಕೊಂಡ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಶಾಹಿದ್ ಕಪೂರ್ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಂದೀಪ್ ರೆಡ್ಡಿ ವೆಂಗ ಅವರೇ ನಿರ್ದೇಶನ ಮಾಡುತ್ತಿದ್ದಾರೆ. 

ಶಾಹಿದ್ ಕಪೂರ್ ಗೆ ಜೋಡಿಯಾಗಿ ತಾರಾ ಸುತಾರಿಯಾ ಅಭಿನಯಿಸಲಿದ್ದಾರೆ ಎಂದು ಈ ಹಿಂದೆ ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಚಿತ್ರದಲ್ಲಿನ ಲಿಪ್ ಲಾಪ್ ಸೀನ್ ಬೇಡ ಅಂತ ತಾರಾ ಸುತಾರಿಯಾ ಚಿತ್ರದಿಂದ ಹೊರಬಂದಿದ್ದಾರೆ.
Posted by: VS | Source: Online Desk

ಈ ವಿಭಾಗದ ಇತರ ಸುದ್ದಿ