ಬಿಗ್‌ಬಾಸ್‌ ಮೂರನೇ ಆವೃತ್ತಿ ಶೂಟಿಂಗ್‌ ಪುಣೆ ಬದಲು ಬಿಡದಿಯಲ್ಲಿ

ಕಿಚ್ಚ ಸುದೀಪ್ ನಿರೂಪಣೆಯ 'ಬಿಗ್‌ ಬಾಸ್‌' ರಿಯಾಲಿಟಿ ಶೋ ಚಿತ್ರೀಕರಣ ಇನ್ನು ಮುಂದೆ ಪುಣೆಯ ಲೋನಾವಾಲದ ಬದಲಿಗೆ ಬೆಂಗಳೂರು...

Published: 19th July 2015 02:00 AM  |   Last Updated: 19th July 2015 04:32 AM   |  A+A-


Bigboss kannada

ಬಿಸ್‌ ಬಾಸ್‌

Posted By : Rashmi Kasaragodu
Source : Online Desk
ಬೆಂಗಳೂರು: ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಕಿಚ್ಚ ಸುದೀಪ್ ನಿರೂಪಣೆಯ "ಬಿಗ್‌ ಬಾಸ್‌'  ರಿಯಾಲಿಟಿ ಶೋ ಚಿತ್ರೀಕರಣ ಇನ್ನು ಮುಂದೆ  ಪುಣೆಯ ಲೋನಾವಾಲದ ಬದಲಿಗೆ ಬೆಂಗಳೂರು ಸಮೀಪ ದಲ್ಲೇ ಇರುವ ಬಿಡದಿಗೆ ಸ್ಥಳಾಂತರಗೊಳ್ಳಲಿದೆ.

"ಬಿಗ್‌ ಬಾಸ್‌' ಮೂರನೇ ಆವೃತ್ತಿಗೆ ಸದ್ದಿಲ್ಲದೆ ಚಾಲನೆ ಸಿಕ್ಕಿದ್ದು, ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ಮುಂದಿನ ಐದು ವರ್ಷಗಳ ಕಾಲ ಕಲರ್ಸ್‌ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಪುಣೆಯ ಲೋನಾವಾಲದಲ್ಲಿ 'ಬಿಸ್‌ ಬಾಸ್‌' ಕಾರ್ಯಕ್ರಮದ ಸೆಟ್‌ ಇದೆ. ಅಲ್ಲಿ ಕನ್ನಡ, ಹಿಂದಿ ಮಾತ್ರವಲ್ಲದೇ ಇತರೆ ಪ್ರಾದೇಶಿಕ ಭಾಷೆಗಳ 'ಬಿಗ್‌ ಬಾಸ್‌' ಚಿತ್ರೀಕರಣವೂ ನಡೆಯುತ್ತವೆ. ಆದರೆ ಈ ವರ್ಷದಿಂದ ಕನ್ನಡದ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ಬಿಡದಿ ಬಳಿಯ ಇನ್ನೋವೇಟಿವ್‌ ಫಿಲ್ಮ್  ಸಿಟಿಯಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಇನ್ನೋವೇಟೀವ್‌ ಫಿಲ್ಮ್ಸಿಟಿಯಲ್ಲಿ ಬಿಗ್‌ಬಾಸ್‌'ಮನೆಯ ಸೆಟ್‌ ಹಾಕುವುದಕ್ಕೆ ಅನುಮತಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಲ್ಲಿ ಬಿಗ್ ಬಾಸ್  ಕಾರ್ಯಕ್ರಮ ಶುರುವಾಗಲಿದೆ. ಕಳೆದೆರೆಡು ಬಾರಿ ಈ ಕಾರ್ಯಕ್ರಮ ರಾತ್ರಿ 8ರಿಂದ9ರವರೆಗೂ ಪ್ರಸಾರವಾಗುತಿತ್ತು. ಈ ಬಾರಿ ಪ್ರಸಾರ ಸಮಯ ಬದಲಾಗುವ ಸಾಧ್ಯತೆ ಇದ್ದು, ಒಂಬತ್ತರಿಂದ ಹತ್ತು ಗಂಟೆಯವರೆಗೂ ಕಾರ್ಯಕ್ರಮ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ.ಇದರೊಂದಿಗೆ ಬಿಗ್‌ ಬಾಸ್‌ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡಾ ಜೋರಾಗಿ ನಡೆಯುತ್ತಿದ್ದು, ಬೇರೆ ಬೇರೆ ಕ್ಷೇತ್ರದಲ್ಲಿ ಸುದ್ದಿಯಾದವರನ್ನು ಬಿಗ್‌ ಬಾಸ್‌ ಮನೆಗೆ ಕರೆತರಲು ಎಲ್ಲಾ ತಯಾರಿಗಳು ನಡೆಯುತ್ತಿವೆ.

Stay up to date on all the latest ಸಿನಿಮಾ ಸುದ್ದಿ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp