'ಹರಿವು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ, ಸಂಚಾರಿ ವಿಜಯ್ ಉತ್ತಮ ನಟ

ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು ಕ್ವೀನ್ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಕಂಗನಾ ರಣಾವತ್ ಉತ್ತಮ ನಟಿ ಪ್ರಶಸ್ತಿ...

Published: 24th March 2015 02:00 AM  |   Last Updated: 24th March 2015 06:11 AM   |  A+A-


Kangana Ranaut and Sanchari Vijay

ಕಂಗನಾ ರಣಾವತ್ ಮತ್ತು ಸಂಚಾರಿ ವಿಜಯ್

Posted By : Rashmi Kasaragodu
Source : Online Desk
ದೆಹಲಿ: ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು ಕ್ವೀನ್ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಕಂಗನಾ ರಣಾವತ್ ಉತ್ತಮ ನಟಿ ಪ್ರಶಸ್ತಿ ಹಾಗು 'ನಾನು ಅವಳಲ್ಲ ಅವನು' ಎಂಬ ಕನ್ನಡ  ಚಿತ್ರಕ್ಕಾಗಿ ಸಂಚಾರಿ ವಿಜಯ್ ಅವರಿಗೆ ಉತ್ತಮ ನಟ ಪ್ರಶಸ್ತಿ ಲಭಿಸಿದೆ.

ಉತ್ತಮ ಚಿತ್ರ ನಿರ್ದೇಶಕ - ಸೃಜಿತ್ ಮುಖರ್ಜಿ ( ಚಟುಷ್ಕೋನೆ - ಬಂಗಾಳಿ)
ಉತ್ತಮ ಸಹನಟ -ಬಾಬ್ಬಿ ಸಿಂಹ  (ಜಿಗರ್ತಂಡಾ -ತಮಿಳು) ಮತ್ತು ಬಲ್ಜಿಂದರ್ ಕೌರ್ (ಪಗ್ಡಿ -The honor (ಹರ್ಯಾಣ್ವಿ )
ಜನಪ್ರಿಯ ಮನೋರಂಜನಾ ಚಿತ್ರ - ಮೆರಿಕೋಮ್
ಉತ್ತಮ ಹಿನ್ನೆಲೆಗಾಯಕ  -ಸುಖ್ವಿಂದರ್ ಸಿಂಗ್ (ಹೈದರ್)
ಅದೇ ವೇಳೆ ಉತ್ತಮ ನೃತ್ಯ ನಿರ್ದೇಶನ, ಸಂಗೀತ, ವೇಷ ಭೂಷಣಕ್ಕಾಗಿ ಹೈದರ್ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ.

ಶ್ರೇಷ್ಠ ಪ್ರಾದೇಶಿಕ ಚಿತ್ರಗಳು

ಶ್ರೇಷ್ಠ  ಮರಾಠಿ ಚಿತ್ರ -ಕಿಲ್ಲಾ
ಶ್ರೇಷ್ಠ ಕನ್ನಡ ಚಿತ್ರ -ಹರಿವು
ಶ್ರೇಷ್ಠ ಬಂಗಾಳಿ ಚಿತ್ರ -ನಿರ್ಭಾಶಿತೋ
ಶ್ರೇಷ್ಠ  ಅಸ್ಸಾಮಿ ಚಿತ್ರ  -ಒತೆಲ್ಲೋ

ವಿಶೇಷ ಪ್ರಶಸ್ತಿ
ಅಮಿತಾಬ್ ಬಚ್ಚನ್ -ಭೂತ್ನಾಥ್ ರಿಟರ್ನ್ಸ್

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp