ಕುತೂಹಲ ಮೂಡಿಸಿದೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಉದ್ಘರ್ಷ' ಪೋಸ್ಟರ್!

ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು ಎರಡು ವರ್ಷಗಳ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿದ್ದು ಇದೀಗ ಉದ್ಘರ್ಷ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ...

Published: 28th August 2018 12:00 PM  |   Last Updated: 28th August 2018 11:34 AM   |  A+A-


ಚಿತ್ರದ ಪೋಸ್ಟರ್

Posted By : VS
Source : The New Indian Express
ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು ಎರಡು ವರ್ಷಗಳ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿದ್ದು ಇದೀಗ ಉದ್ಘರ್ಷ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಸುನೀಲ್ ಕುಮಾರ್ ದೇಸಾಯಿ ಅವರು ಉದ್ಘರ್ಷ ಚಿತ್ರದ ಫಸ್ಟ್ ಲುಕ್ ನಲ್ಲಿ ರಕ್ತ ಸಿಕ್ತ ಹುಡುಗಿಯೊಬ್ಬಳ ಕಾಲುಗಳನ್ನು ತೋರಿಸಿ ಪೋಸ್ಟರ್ ನಲ್ಲೇ ಕುತೂಹಲ ಕೆರಳಿಸಿದ್ದಾರೆ. ಚಿತ್ರದ ಪೋಸ್ಟರ್ ಗೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ. ಇನ್ನು ಚಿತ್ರದ ಮೇಲೆ ಕುತೂಹಲ ಹುಟ್ಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. 

ಚಿತ್ರದಲ್ಲಿ ಕೇವಲ 20 ನಿಮಿಷಗಳ ಡೈಲಾಗ್ ಮಾತ್ರ ಇರುತ್ತದೆ. ಇನ್ನುಳಿದಂತೆ ಹಿನ್ನಲೆ ಸಂಗೀತ ಹಾಗೂ ಕಲಾವಿದರ ನಟನೆಯಿಂದ ಚಿತ್ರ ಮುಂದುರೆಯುತ್ತದೆ ಎಂದು ಸುನೀಲ್ ಕುಮಾರ್ ದೇಸಾಯಿ ಅವರು ಹೇಳಿದ್ದಾರೆ. 

ಸುನೀಲ್ ಕುಮಾರ್ ದೇಸಾಯಿ ಅವರು ಈ ಹಿಂದೆ ತರ್ಕ, ಉತ್ಕರ್ಷ, ಸಂಘರ್ಷ, ನಿಷ್ಕರ್ಷ ಮುಂತಾದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಕಂಡಿದ್ದರು. ಆ ಬಳಿಕ ಮರ್ಮ, ಕ್ಷಣ ಕ್ಷಣ ಮತ್ತು ರೇ ಚಿತ್ರಗಳು ಅಂದುಕೊಂಡಂತ ಯಶಸ್ಸು ಕಾಣಲಿಲ್ಲ. ಇದೀಗ ಮತ್ತೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. 

ಉದ್ಘರ್ಷ ಚಿತ್ರ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್, ಅನೂಪ್, ಧನ್ಸಿಕಾ, ತಾನ್ಯ ಹೋಪ್, ಕಬೀರ್ ಸಿಂಗ್ ದುಹಾನ್, ಹರ್ಷಿಕಾ ಪೂಣಚ್ಚ ಸೇರಿದಂತೆ ದೊಡ್ಡ ತಾರಾ ದಂಡೆ ಚಿತ್ರದಲ್ಲಿ ಕಾಣಿಸಲಿದೆ. 

ಚಿತ್ರವನ್ನು ದೇವರಾಜ್ ಎಂಬುವರು ನಿರ್ಮಾಣ ಮಾಡುತ್ತಿದ್ದು ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಸಂಜೋಯ್ ಚೌಧರಿ ಸಂಗೀತ ನೀಡುತ್ತಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp