'ಆರೆಂಜ್' ನನ್ನದೇ ಕಥೆ ಆಧಾರಿತ ಚಿತ್ರ: ನಿರ್ದೇಶಕ ಪ್ರಶಾಂತ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರಕ್ಕೆ ಇನ್ನು ಕೇವಲ 1 ವಾರವಷ್ಟೇ ಇದ್ದು, ಚಿತ್ರ ತಂದ ಇದೀಗ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರಕ್ಕೆ ಇನ್ನು ಕೇವಲ 1 ವಾರವಷ್ಟೇ ಇದ್ದು, ಚಿತ್ರ ತಂದ ಇದೀಗ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. 

ಜೂಮ್ ಚಿತ್ರದಲ್ಲಿ ಮಾಡಿದ್ದ ತಪ್ಪುಗಳನ್ನು ಅರಿತುಕೊಂಡಿರುವ ನಿರ್ದೇಶಕ ಪ್ರಶಾಂತ್ ಅವರು, ಆರೆಂಜ್ ಚಿತ್ರದಲ್ಲಿ ಯಾವುದು ಮಾಡಬೇಕು ಹಾಗೂ ಯಾವುದು ಮಾಡಬಾರದು ಎಂಬುದನ್ನು ತಂಡಕ್ಕೆ ಸೂಕ್ತ ರೀತಿಯಲ್ಲಿ ನಿರ್ದೇಶನ ನೀಡಿದ್ದಾರೆ. 

ಗಣೇಶ್ ಹಾಗೂ ನಾನು ಇಬ್ಬರು ಯಾವೆಲ್ಲಾ ಕೆಲಸ ಮಾಡಬೇಕು, ಯಾವುದು ಮಾಡಬಾರದು ಎಂಬ ಪಟ್ಟಿಯನ್ನು ಸಿದ್ಧಪಡಿದ್ದೆವು. ಹಿಂದಿನ ಚಿತ್ರದಲ್ಲಿ ಆಗಿದ್ದ ತಪ್ಪುಗಳು ಮರುಕಳಿಸದಂತೆ ನೋಡಿಕೊಂಡಿದ್ದೇವೆ. ಆರೆಂಜ್ ಫ್ಯಾಮಿಲಿ ಎಂಟರ್'ಟೇನರ್ ಚಿತ್ರವಾಗಿದೆ. ಹಿಂದಿನ ಚಿತ್ರದಲ್ಲಿ ಮಕ್ಕಳನ್ನು ಅಷ್ಟೊಂದು ಆಕರ್ಷಿಸಲು ಸಾಧ್ಯವಾಗಿರಲಿಲ್ಲ. ಈ ಚಿತ್ರದಲ್ಲಿ ಆ ಕೆಲಸವನ್ನು ಮಾಡಲಾಗಿದೆ ಎಂದು ನಿರ್ದೇಶಕ ಪ್ರಶಾಂತ್ ಅವರು ಹೇಳಿದ್ದಾರೆ. 

ಚಿತ್ರದಲ್ಲಿ ಗಣೇಶ್ ಅವರು ಸಂತೋಷ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಿಯಾ ಆನಂದ್ ಅವರು ರಾಧಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಗಣೇಶ್ ಕಳ್ಳನ ಪಾತ್ರದಲ್ಲಿ ನಟಿಸಿದ್ದಾರೆ. ಸಾಧುಕೋಕಿಲಾ ಕುಸ್ತಿಪಟು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಹಿಂಸಾಚಾರ ನನಗಿಷ್ಟವಿಲ್ಲ. ಜೀವನ ಅತ್ಯಂತ ಸುಂದರವಾದದ್ದು. ಪ್ರತೀಯೊಬ್ಬರೂ ಅದನ್ನು ಆಹ್ಲಾದಿಸಬೇಕು. ಚಿತ್ರದಲ್ಲಿ ವಿಲನ್ ಇದ್ದರೂ, ವಿಲನ್ ಪಾತ್ರವನ್ನು ಮನರಂಜನಾತ್ಮಕವಾಗಿ ತೋರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಚಿತ್ರದ ಟೈಟಲ್ ಬಗ್ಗೆ ಮಾತನಾಡಿದ ಅವರು, ಚಿತ್ರದಲ್ಲಿ ಆರೆಂಜ್ ಹಣ್ಣು ಬಹುಮುಖ್ಯ ಪಾತ್ರವಹಿಸುತ್ತದೆ. ಆರೆಂಜ್ ಕಾರಣದಿಂದಲೇ ಇಬ್ಬರು ವ್ಯಕ್ತಿಗಳು ಇಲ್ಲಿ ಭೇಟಿಯಾಗುತ್ತಾರೆ. ಚಿತ್ರದಲ್ಲಿ ಕ್ಯೂಟ್ ಲವ್ ಸ್ಟೋರಿ ಇದೆ. ಮೈನೆ ಪ್ಯಾರ್ ಕಿಯಾ ಮತ್ತು ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗ್ ಚಿತ್ರ ನೋಡಲು ನನಗೆ ಬಹಳ ಇಷ್ಟವಾಗುತ್ತದೆ. ಇದೇ ರೀತಿಯ ಸುಂದರ ಪ್ರೇಮ ಕಥೆ ನಮ್ಮ ಚಿತ್ರದಲ್ಲೂ ಇದೆ ಎಂದಿದ್ದಾರೆ. 

ಜೂಮ್ ಚಿತ್ರದಲ್ಲಿ ರಾಜಾಧಿ ರಾಜ ಹಾಡನ್ನು ಬರೆದಿದ್ದೆ. ಆ ಹಾಡನ್ನು ಪುನೀತ್ ರಾಜ್ ಕುಮಾರ್ ಅವರು ಹಾಡಿದ್ದರು. ಹಾಡು ಸೂಪರ್ ಹಿಟ್ ಆಗಿತ್ತು. ಆರೆಂಜ್ ಚಿತ್ರದಲ್ಲೂ ಎರಡು ಹಾಡುಗಳನ್ನು ಬರೆದಿದ್ದೇನೆ. ಇನ್ನುಳಿದ ಎರಡು ಹಾಡುಗಳನ್ನು ಕವಿರಾಜ್ ಅವರು ಬರೆದಿದ್ದಾರೆ. ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಗಳಿವೆ. 

ದಳಪತಿಯಲ್ಲಿ ನನ್ನ ಕಥೆ ಇರಲಿಲ್ಲ. ದಳಪತಿ ಚಿತ್ರದಲ್ಲಿ ಸರಿಯಾಗಿ ಕೆಲಸ ಮಾಡಿರಲಿಲ್ಲ. ಆದರೆ, ಆರೆಂಜ್ ಚಿತ್ರ ನನ್ನದೇ ಕಥೆ ಆಧಾರಿತ ಚಿತ್ರವಾಗಿದ್ದು, ನನ್ನದೇ ರೀತಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com