ಕೆಜಿಎಫ್ ನೋಡಿದ ಬಳಿಕ ಬಾಲಿವುಡಿಗರಿಗೆ ಹಿಗ್ಗಾಮುಗ್ಗ ಉಗಿದ ಹಿಂದಿ ಪ್ರೇಕ್ಷಕ, ವಿಡಿಯೋ ವೈರಲ್!

ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಧೂಳೆಬ್ಬಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರವನ್ನು ನೋಡಿದ ಬಳಿಕ ಪರಭಾಷಾ ಪ್ರೇಕ್ಷಕನೊಬ್ಬ...

Published: 23rd December 2018 12:00 PM  |   Last Updated: 25th December 2018 11:24 AM   |  A+A-


Yash

ಯಶ್

Posted By : VS
Source : Online Desk
ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಧೂಳೆಬ್ಬಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರವನ್ನು ನೋಡಿದ ಬಳಿಕ ಪರಭಾಷಾ ಪ್ರೇಕ್ಷಕನೊಬ್ಬ ಬಾಲಿವುಡ್ ಮಂದಿಗೆ ಹಿಗ್ಗಾಮುಗ್ಗ ಉಗಿದಿರುವ ವಿಡಿಯೋ ವೈರಲ್ ಆಗಿದೆ. 

ವಿಡಿಯೋದಲ್ಲಿ ಪ್ರೇಕ್ಷಕ, ಚಿತ್ರಕ್ಕೆ ಸಂಗೀತ ನೀಡುವುದು ಹೇಗೆ ಅಂತಾ ಕನ್ನಡಿಗರಲ್ಲಿ ನೋಡಿ ಕಲಿಯಿರಿ. ಕೆಜಿಎಫ್ ಚಿತ್ರದ ಹಿನ್ನಲೆ ಸಂಗೀತ ಕೇಳಿ ನನ್ನ ನರ, ನಾಡಿ, ರೋಮಗಳೆಲ್ಲವೂ ರೋಮಾಂಚಿತಗೊಂಡಿತು. ಬಾಲಿವುಡ್ ನೀವು ಇದ್ದೀರಾ, ಚಿಕ್ಕ ಮಕ್ಕಳು ಪಿಯಾನೋ ಬಾರಿಸುವಂತೆ ಸಂಗೀತ ನೀಡುತ್ತಿರಾ ಎಂದು ಚಾಡಿಸಿದ್ದಾನೆ. 

ಕೆಜಿಎಫ್ ಚಿತ್ರ ದಕ್ಷಿಣ ಭಾರತದಲ್ಲೇ ಅಷ್ಟೇ ಅಲ್ಲ, ಉತ್ತರ ಭಾರತದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು ಅಲ್ಲಿನ ಪ್ರೇಕ್ಷಕರನ್ನು ರೋಮಾಂಚಿತಗೊಳಿಸಿದೆ. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp