ಕೆಜಿಎಫ್ ಭರ್ಜರಿ ಕಲೆಕ್ಷನ್: 4ನೇ ದಿನಕ್ಕೆ 75 ಕೋಟಿ, ಕನ್ನಡದ ಮಟ್ಟಿಗೆ ಹೊಸ ದಾಖಲೆ!

ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ನಿರ್ಮಿಸಿದೆ...
ಯಶ್
ಯಶ್
ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ನಿರ್ಮಿಸಿದೆ. 
ಮೊದಲ ದಿನ ಕೆಜಿಎಫ್ ಚಿತ್ರ ಗ್ರಾಸ್ ಆಗಿ 25 ಕೋಟಿ ರುಪಾಯಿ ಹಾಗೂ ಎರಡನೇ ದಿನ 19 ಕೋಟಿ ರುಪಾಯಿ ಕಲೆಕ್ಷನ್ ಮಾಡಿತ್ತು. ಮೂರನೇ ದಿನ 17.50 ಕೋಟಿ ನಾಲ್ಕನೇ ದಿನ 15 ಕೋಟಿ ರುಪಾಯಿ ಕಲೆಕ್ಷನ್ ಮಾಡುವ ಮೂಲಕ ಒಟ್ಟಾರೆ ಬಾಕ್ಸ್ ಆಫೀಸ್ ನಲ್ಲಿ 76 ಕೋಟಿ ರುಪಾಯಿ ಬಾಚಿದೆ. ಇದು ಕನ್ನಡದ ಮಟ್ಟಿಗೆ ಇದೊಂದು ಹೊಸ ಮೈಲಿಗಲ್ಲು.
ಕರ್ನಾಟಕದಲ್ಲಿ ಕೆಜಿಎಫ್ ಚಿತ್ರ ಮೊದಲ ದಿನ 13 ಕೋಟಿ ರುಪಾಯಿ ಕಲೆಕ್ಷನ್ ಹಾಗೂ ಎರಡನೇ ದಿನ 14 ಕೋಟಿ ಕಲೆಕ್ಷನ್ ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದು ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 
ಹಿಂದಿಯಲ್ಲಿ ಮೊದಲ ದಿನ 2.10 ಕೋಟಿ ರುಪಾಯಿ ಕಲೆಕ್ಷನ್ ಮಾಡಿದ್ದು ಎರಡನೇ ದಿನ 3 ಕೋಟಿ ಮೂರನೇ ದಿನ 4 ಕೋಟಿ ಕಲೆಕ್ಷನ್ ಮಾಡಿದ್ದು ಮಾಡಿದ್ದು ಒಟ್ಟಾರೆ 9.10 ಕೋಟಿ ಗಳಿಗೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com