ಪ್ರಶಾಂತ್ ನೀಲ್ ಹಾಲಿವುಡ್ ಸಿನಿಮಾ ಮಾಡಬೇಕೆಂಬುದು ನನ್ನ ಬಯಕೆ: ಯಶ್

ಯಶ್‌ ಅಭಿನಯದ ಬಹುನಿರೀಕ್ಷಿತ "ಕೆಜಿಎಫ್' ಚಿತ್ರದ ಟ್ರೇಲರ್‌ ಶುಕ್ರವಾರ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ...
ಕೆಜಿಎಫ್ ಚಿತ್ರದ ಸ್ಚಿಲ್
ಕೆಜಿಎಫ್ ಚಿತ್ರದ ಸ್ಚಿಲ್
ಬೆಂಗಳೂರು: ಯಶ್‌ ಅಭಿನಯದ ಬಹುನಿರೀಕ್ಷಿತ "ಕೆಜಿಎಫ್' ಚಿತ್ರದ ಟ್ರೇಲರ್‌ ಶುಕ್ರವಾರ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಸಿನಿಮಾ ಕನ್ನಡದಲ್ಲಿ ಶೂಟಿಂಗ್ ಆಗಿದ್ದು, ನಂತರ ಉಳಿದ ಭಾಷೆಗಳಿಗೆ ಡಬ್ ಮಾಡಲಾಗಿದೆ.
ಡಿಸೆಂಬರ್ 21 ರಂದು ಸಿನಿಮಾ ರಿಲೀಸ್ ಆಗಲಿದ್ದು, ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ನಟ ಅಂಬರೀಷ್ ಹಾಗೂ ತಮಿಳು ನಟ ವಿಶಾಲ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು,  ನಟ ಶಿವರಾಜ್ ಕುಮಾರ್ ಆಗಮಿಸಬೇಕಿತ್ತು, ಆದರೆ ಅವರ ಸಿನಿಮಾ ಶೂಟಿಂಗ್ ಇದ್ದ ಕಾರಣ ಗೈರಾಗಿದ್ದರು. ಆದರೆ ಆಡಿಯೋ ಕ್ಲಿಪ್ ಕಳುಹಿಸುವ ಮೂಲಕ ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು. 
ತಮಿಳಿನಲ್ಲಿ ಒಂದು ಹಾಡಿನ ಚಿತ್ರೀಕರಣಕ್ಕೆ ಅಥವಾ ಒಂದು ಸನ್ನಿವೇಶಕ್ಕೆ ಸುಮಾರು 5 ಕೋಟಿ ರು ಖರ್ಚು ಮಾಡುತ್ತಾರೆ, ಆದರೆ ಕನ್ನಡದಲ್ಲಿ ಅವರು ಒಂದು ಹಾಡಿಗೆ ಖರ್ಚು ಮಾಡುವ ಹಣದಲ್ಲಿ ನಾವು ಇಡೀ ಚಿತ್ರ ತಯಾರು ಮಾಡಿರುತ್ತೇವೆ, ಕನ್ನಡ ಚಿತ್ರೋದ್ಯಮ ಇನ್ನೂ ತನ್ನ ಪ್ರಾಮುಖ್ಯತೆಗಾಗಿ ಹೋರಾಡುತ್ತಿದೆ. ಕೆಜಿಎಫ್ ಮೂಲಕ  ಪರಿಸ್ಥಿತಿ ಬದಲಾಗಲಿದೆ ಎಂದು ನಾನು ನಂಬುತ್ತೇನೆ ಎಂದು ನಟ ಅಂಬರೀಷ್ ತಿಳಿಸಿದರು.
ನಟ ವಿಶಾಲ್‌ ಮಾತನಾಡಿ, "ಯಶ್‌ ನನ್ನ ಒಳ್ಳೆಯ ಗೆಳೆಯ. ಈಗ "ಕೆಜಿಎಫ್' ಮೂಲಕ ಗಡಿದಾಟುತ್ತಿದ್ದಾರೆ. ಅವರಿಗೆ ಆ ಅರ್ಹತೆ ಕೂಡ ಇದೆ. ತಮಿಳಿನಲ್ಲಿ ನಮ್ಮ ಬ್ಯಾನರ್‌ನಲ್ಲಿ ರಿಲೀಸ್‌ ಮಾಡುತ್ತಿರುವುದು ಖುಷಿಯ ವಿಚಾರ. ಸಿನಿಮಾದಲ್ಲಿ ನಾನು ಅವರ ಸಹೋದರನಾಗಿ ನಟಿಸಿರುವು ಹೆಮ್ಮೆಯ ವಿಚಾರ, ತಮಿಳಿನಲ್ಲಿ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತೇನೆ' ಎಂದರು. ನಟ ಯಶ್ ಇಂಡಿಯನ್ ನಟ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಬಹಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡಬೇಕೆಂಬ ಯೋಜನೆ ಇರಲಿಲ್ಲ,  ನಾವು ಕನ್ನಡ ಪ್ರೇಕ್ಷ್ಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ತಯಾರಿಸಿದೆವು, ಆದರೆ ನಟ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಂಗದೂರು ಸಿನಿಮಾ ಬಗ್ಗೆ ಬೇರೆಯೇ ದೃಷ್ಟಿ ಹೊಂದಿದ್ದರು,. ಹೀಗಾಗಿ ಅವರ ಬಯಕೆಯಂತೆ ಕೆಜಿಎಫ್ ಸಿನಿಮಾವನ್ನು ಬೇರೆ ಬೇರೆ ಭಾಷೆಗಳಿಗ ಡಬ್ಬಿಂಗ್ ಮಾಡಲಾಯಿತು ಎಂದರು. ಜೊತೆಗೆ ಸಿನಿಮಾ ಬಿಡುಗಡೆ ವಿಳಂಬವಾಗಿದ್ದಕ್ಕೆ ಕ್ಷಮೆ ಕೋರಿದರು. 2 ವರ್ಷದ ಹಿಂದೆಯೇ ಸಿನಿಮಾ ಪೂರ್ಣಗೊಳ್ಳಬೇಕಿತ್ತು, ಆದರೆ ಸಾಧ್ಯವಾಗಲಿಲ್ಲ ಎಂದು ಹೇಳಿದರು.
ನಂತರ ಮಾತನಾಡಿದ ನಟ ಯಶ್ ಐದು ಭಾಷೆಗಳಲ್ಲಿಯೂ ಎಲ್ಲರಿಗೂ ಶುಭಾಶಯ ಕೋರಿದರು,.  ನಿರ್ಮಾಪಕ ವಿಜಯ್ ಕಿರಂಗದೂರು ಕಥೆ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಕೆಜಿಎಫ್ ಸಾಧ್ಯವಾಯಿತು. ನನ್ನ ಮೇಲೆ ಸಂಪೂರ್ಣ ನಂಬಿಕೆ ಇರಿಸಿ ಅತಿ ಹೆಚ್ಚಿನ ಮೊತ್ತದ ಬಂಡವಾಳ ಹೂಡಿದ್ದಾರೆ. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಗಿಂತಲೂ ಇದು ದೊಡ್ಡ ಸಿನಿಮಾವಾಗಿದೆ, ಹಾಲಿವುಡ್ ಸಿನಿಮಾಗೆ ಸರಿ ಸಮವಾಗಿದೆ. ಪ್ರಶಾಂತ್ ನೀಲ್ ಹಾಲಿವುಡ್ ನಲ್ಲಿ ಸಿನಿಮಾ ನಿರ್ದೇಶನ ಮಾಡಬೇಕೆಂಬುದು ನನ್ನ ಆಸೆ ಎಂದು ಯಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com