'ತಾಯಿಗೆ ತಕ್ಕ ಮಗ' ಚಿತ್ರದ ಮೂಲಕ ನಾನು ನನ್ನ ತಾಯಿಗೆ ಗೌರವ ಸೂಚಿಸುತ್ತೇನೆ: ಅಜಯ್ ರಾವ್

ಈ ವಾರ ತೆರೆ ಕಾಣುತ್ತಿರುವ ಅಜಯ್ ರಾವ್ ಅವರ "ತಾಯಿಗೆ ತಕ್ಕ ಮಗ" ಅಜಯ್ ಪಾಲಿಗೆ ಹಲವು ಕಾರಣಗಳಿಂದ ಅತ್ಯಂತ ಮುಖ್ಯವಾಗುತ್ತದೆ. ಮೊದಲನೆಯದಾಗಿ ಅಜಯ್ ಅವರ 25ನೇ ಚಿತ್ರ
ಸುಮಲತಾ ಮತ್ತು ಅಜಯ್ ರಾವ್
ಸುಮಲತಾ ಮತ್ತು ಅಜಯ್ ರಾವ್
ಬೆಂಗಳೂರು: ಈ ವಾರ ತೆರೆ ಕಾಣುತ್ತಿರುವ ಅಜಯ್ ರಾವ್ ಅವರ "ತಾಯಿಗೆ ತಕ್ಕ ಮಗ" ಅಜಯ್ ಪಾಲಿಗೆ ಹಲವು ಕಾರಣಗಳಿಂದ ಅತ್ಯಂತ ಮುಖ್ಯವಾಗುತ್ತದೆ. ಮೊದಲನೆಯದಾಗಿ ಅಜಯ್ ಅವರ 25ನೇ ಚಿತ್ರ ಇದು. ಇನ್ನು ನಿರ್ದೇಶಕ ಶಶಂಕ್ ಹಾಗೂ ಅಜಯ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರಸಹ ಹೌದು.
ಹಿರಿಯ ನಟಿ ಸುಮಲತಾ ಅಜಯ್ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರ ತಾಯಿ ಹಾಗೂ ಮಗನ ಸಂಬಂಧವನ್ನೇ ಪ್ರಧಾನವಾಗಿ ತೋರಿಸಲಿದೆ. ಆಶಿಕಾ ರಂಗನಾಥ್ ಅಜಯ್ ಗೆ ನಾಯಕಿಯಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
"ಮೂಲತಃ ಇದೊಂದು ಆಕ್ಷನ್ ಚಿತ್ರ. ಇದರಲ್ಲಿ ನಾನು ಚಿಕ್ಕವನಿದ್ದಾಗ ಕಲಿತಿದ್ದ ಕರಾಟೆ ವಿದ್ಯೆಯ ಕೆಲ ಪಟ್ಟುಗಳನ್ನು ತೋರಿಸಲು ಅವಕಾಶ ಸಿಕ್ಕಿದೆ. ಹೀಗೆ ಹಲವು ಕಾರಣಕ್ಕಾಗಿ ನನಗೆ ಈ ಚಿತ್ರ ವಿಶೇಷವಾಗಿದೆ" ಅಜಯ್ ಹೇಳಿದ್ದಾರೆ.
"ನಾನು ತಾಯಿಯನ್ನು ಬಹಳ ಪ್ರೀತಿಸುತ್ತೇನೆ. ಅವರು ನನ್ನ ಪಾಲಿಗೆ ದೇವರಾಗಿದ್ದಾರೆ. ನಾನು ಅಭಿನಯಿಸುವ ಈ ಚಿತ್ರಕ್ಕೆ "ತಾಯಿಗೆ ತಕ್ಕ ಮಗ" ಟೈಟಲ್ ದೊರಕಿದ್ದು ನಿಜಕ್ಕೂ ನನ್ನ ಅದೃಷ್ಟವಾಗಿದೆ. ಶಶಾಂಕ್ ನನಗೆ ಚಿತ್ರರಂಗದ ಹೊರತಾಗಿ ಸಹ ಒಳ್ಳೆಯ ಪರಿಚಯಸ್ಥರಾಗಿದ್ದಾರೆ. ಹಾಗಾಗಿ ಅವರ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸುವುದು ನನಗೆ ಕಷ್ಟವಾಗುವುದಿಲ್ಲ. ಇನ್ನು ಹಿರಿಯ ನಟಿ ಸುಮಲತಾ ತೆರೆ ಮೇಲೆ ನನ್ನ ಅಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ನನ್ನ ಮೊದಲ ಚಿತ್ರದಲ್ಲಿ ಸಹ ಆಕೆ ಇದೇ ಬಗೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ನಮ್ಮಿಬ್ಬರನ್ನು ತೆರೆ ಮೇಲೆ ಒಟ್ಟಾಗಿ ತೋರಿಸಲಾಗುತ್ತಿದೆ.ಚಿತ್ರದಲ್ಲಿ ಭಾವನಾತ್ಮಕ ದೃಶ್ಯಗಳಿದ್ದರೂ ಬ್ಬೇಸರ ಹುತ್ಟಿಸುವಂತೆ ಎಲ್ಲಿಯೂ ಚಿತ್ರಿತವಾಗಿಲ್ಲ" ಅವರು ಹೇಲಿದ್ದಾರೆ.
"ಇನ್ನು ತಾಯಿಗೆ ತಕ್ಕ ಮಗ ಚಿತ್ರಕ್ಕೆ "ಎ" ಸರ್ಟಿಫಿಕೇಟ್ ಸಿಕ್ಕಿರುವುದು ಮಾತ್ರ ನನಗೆ ಬಹಳ ಆಘಾತವನ್ನುಂಟುಮಾಡಿದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಕ್ತಪಾತವನ್ನು ವೈಭವೀಕರಿಸಲಾಗಿದೆ ಎಂದು ಸೆನ್ಸಾರ್ ಮಂಡಳಿ ಅಭಿಪ್ರಾಯಪಟ್ಟಿದೆ. ಆದರೆ ನಾನು ಪ್ರಾಮಾಣಿಕವಾಗಿ ಹೇಳಬೇಕೆಂದರೆ ಸೆನ್ಸಾರ್ ಬೋರ್ಡ್ ಗೆ ಕಳಿಸುವ ಮುನ್ನ ನಾನು ನನ್ನ ಕುಟುಇಂಬದೊಡನೆ ಈ ಚಿತ್ರ ವೀಕ್ಷಿಸಿದ್ದೆ. ಅವರು ಕ್ಲೈಮ್ಯಾಕ್ಸ್ ದೃಶ್ಯವನ್ನು ಹ್ಬಹಳ ನಾಜೂಕಾಗಿ ಚಿತ್ರಿಸಿದ್ದಕ್ಕೆ ಮೆಚ್ಚುಗೆ ಸೂಚಿಸಿದ್ದರು.ಹಾಗೆಯೇ ಸೆನ್ಸಾರ್ ಮಂಡಳಿ ಸಹ ನಮ್ಮ ಚಿತ್ರವನ್ನು ಒಪ್ಪಿಕೊಳ್ಳುತ್ತದೆ ಎಂದೇ ನಾನು ಭಾವಿಸಿದೆ, ಆದರೆ ಹಾಗಾಗಲಿಲ್ಲ"
"ಈ ಮುನ್ನ ಶಶಾಂಕ್ ಬದಲು ಬೇರೊಬ್ಬ ನಿರ್ದೇಶಕರು ಈ ಚಿತ್ರವನ್ನು ನಿರ್ದೇಶನ ಮಾಡುವುದೆಂದು ತೀರ್ಮಾನವಾಗಿತ್ತು. ಆದರೆ ಇಬ್ಬರು ನಿರ್ದೇಶಕರು ನಿರಾಕರಿಸಿದ ಬಳಿಕ ಚಿತ್ರದ ನಿರ್ಮಾಪಕರೂ ಆಗಿದ್ದ ಶಶಾಂಕ್ ಆಕ್ಷನ್ ಕಟ್ ಹೇಳಲು ಮುಂದಾದರು.ನಾನು ಇದಾಗಲೇ "ಕೃಷ್ಣನ್ ಲವ್ ಸ್ಟೋರಿ", :"ಕೃಷ್ಣ ಲೀಲಾ" ಚಿತ್ರಗಳಲ್ಲಿ ಶಶಾಂಕ್ ನಿರ್ದೇಶನದಲ್ಲಿ ಅಭಿನಯಿಸಿದ್ದೇನೆ.. ಹೀಗಾಗಿ ನನಗೆ ಅವರೊಡನೆ ಕೆಲಸ ಮಾಡುವುದಕ್ಕೆ ಯಾವ ಅಭ್ಯಂತರವಿರಲಿಲ್ಲ."
ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಮೋಹನ್ ದಾಸ್ ಆಗಿ ಕಾಣಿಸಲಿರುವ ಅಜಯ್ ಲವ್ ಮ್ಯಾನ್ ಆಗಿದ್ದವರು ಆಕ್ಷನ್ ಹೀರೋ ಆಗಿ ಬದಲಾಗುತ್ತಿದ್ದಾರೆ. ಇದು ನಿರೇಶಕರ ಆಯ್ಕೆ ಎಂದು ಅಜಯ್ ಮನಸ್ಸಂತೋಷದಿಂದ ಒಪ್ಪಿಕೊಳ್ಳುತ್ತಾರೆ. "ನನ್ನ 25ನ್ಬೇ ಚಿತ್ರದಲ್ಲಿ ನಾನು ಪ್ರೇಮಿಯಾಗಿ ರೊಮಾನ್ಸ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಬದಲು ಆಕ್ಷನ್ ಹೀರೋ ಆಗುವ ಮೂಲಕ ನಾನೊಬ್ಬ ಸಂಪೂರ್ಣ ಪ್ರಮಾಣದ ನಾಯಕ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದೇನೆ"
15  ವರ್ಷಗಳ ವೃತ್ತಿ ಬದುಕಿನಲ್ಲಿ ಅಜಯ್ 25  ಚಿತ್ರ ಮಾಡಿದ್ದಾರೆ. "ನಾನು ಕೇವಲ ಹಣಕ್ಕಾಗಿ ನಟನೆಗಿಳಿಯುವುದಿಲ್ಲ.  ಅದು ನನಗೆ ತ್ರೂಪ್ತಿದಾಯಕವೂ ಅಲ್ಲ, ನನಗೆ ಪ್ರಾಮಾಣಿಕವಾಗಿರಬೇಕು, ಅದೇ ಮುಖ್ಯ" ಅಜಯ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com