ನಿಮ್ಮ ಪರಿಶ್ರಮದ ಪ್ರತಿಫಲ ಎಂದ ಪತ್ನಿ ಪ್ರಿಯಾ, ನಿನೇ ನನಗೆ ಸ್ಪೂರ್ತಿ ಎಂದ ಕಿಚ್ಚಾ ಸುದೀಪ್!

ನಟ ಕಿಚ್ಚಾ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕಾಗಿ ದೇಹದಂಡಿಸಿದ್ದು, ಸುದೀಪ್ ಕಟ್ಟುಮಸ್ತಾದ ದೇಹಕ್ಕೆ ಪತ್ನಿ ಪ್ರಿಯಾ ಕೂಡ ಫಿದಾ ಆಗಿದ್ದಾರೆ.

Published: 18th November 2018 12:00 PM  |   Last Updated: 18th November 2018 11:12 AM   |  A+A-


this is a story of determination, grit and willpower: Wife Priya on Kiccha Sudeep's Body Transformation

ಪೈಲ್ವಾನ್ ಚಿತ್ರದ ಪೋಸ್ಟರ್

Posted By : SVN
Source : Online Desk
ಬೆಂಗಳೂರು: ನಟ ಕಿಚ್ಚಾ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕಾಗಿ ದೇಹದಂಡಿಸಿದ್ದು, ಸುದೀಪ್ ಕಟ್ಟುಮಸ್ತಾದ ದೇಹಕ್ಕೆ ಪತ್ನಿ ಪ್ರಿಯಾ ಕೂಡ ಫಿದಾ ಆಗಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಪೈಲ್ವಾನ್ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ ನಲ್ಲಿ ಸುದೀಪ್ ಲುಕ್ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇತ್ತ ಸುದೀಪ್ ಪತ್ನಿ ಪ್ರಿಯಾ ರಾಧಾಕೃಷ್ಣ ಅವರು ಕೂಡ ಪತಿಯ ಲುಕ್ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಿಯಾ ಅವರು, ಸುದೀಪ್ ಅವರನ್ನು ಈ ಲುಕ್‍ನಲ್ಲಿ ನೋಡುತ್ತೆನೆಂದು ನಾನು ಊಹೆ ಕೂಡ ಮಾಡಿಕೊಂಡಿರಲಿಲ್ಲ. ಅವರ ಶ್ರದ್ಧೆ, ಆತ್ಮಸ್ಥೈರ್ಯ, ಅವರಲ್ಲಿರುವ ಶಕ್ತಿ ಇಂದು ಪೈಲ್ವಾನ್‍ ನಲ್ಲಿ ನಾವು ಕಾಣುತ್ತಿದ್ದೇವೆ. ಪೈಲ್ವಾನ್ ಅವರ ಪರಿಶ್ರಮದ ಫಲ ಎಂದು ಪ್ರಿಯಾ ಟ್ವೀಟ್ ಮಾಡಿದ್ದಾರೆ.

ಇನ್ನು ಪ್ರಿಯಾ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, ನಿನ್ನ ಪರಿಶ್ರಮ ಮತ್ತು ಶ್ರದ್ಧೆಯ  ಮುಂದೆ ಇವೆಲ್ಲಾ ಏನೂ ಇಲ್ಲ. ನನ್ನನ್ನು ಉತ್ತೇಜಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಸುದೀಪ್ ಸಿನಿಮಾದಿಂದ ಸಿನಿಮಾಕ್ಕೆ ಹೊಸ ಲುಕ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡುತ್ತಾರೆ. ಅಲ್ಲದೇ ಇತ್ತೀಚೆಗೆ ತೆರೆಕಂಡಿದ್ದ ವಿಲನ್ ಲುಕ್‍ ಅನ್ನು ಕೂಡ ಹಲವು ಅಭಿಮಾನಿಗಳು ಫಾಲೋ ಮಾಡಿದ್ದರು. ಇತ್ತ ಪೈಲ್ವಾನ್ ಸಿನಿಮಾ ಹೊಸ ದಾಖಲೆಗಳನ್ನು ಬರೆಯಲು ಮುಂದಾಗಿದ್ದು, ಎಂಟು ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾ ಒಟ್ಟು 30 ರಿಂದ 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp