ಕೆಜಿಎಫ್ ಮೊದಲ ಭಾಗದ ಪ್ರದರ್ಶನದ ಅವಧಿ ಎಷ್ಟು ಗೊತ್ತೆ?

ಐದು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಯಶ್ ಅಭಿನಯದ ಕೆಜಿಎಫ್ ಸಿನಿಮಾ ದೇಶಾದ್ಯಂತ ತೀವ್ರ ಕೂತೂಹಲ ಮೂಡಿಸಿದೆ, ನಿರ್ದೇಶಕ ಪ್ರಶಾಂತ್ ನೀಲ್ ...

Published: 20th November 2018 12:00 PM  |   Last Updated: 20th November 2018 11:22 AM   |  A+A-


A stoll from KGF

ಕೆಜಿಎಫ್ ಪೋಸ್ಟರ್

Posted By : SD
Source : The New Indian Express
ಬೆಂಗಳೂರು: ಐದು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಯಶ್ ಅಭಿನಯದ ಕೆಜಿಎಫ್ ಸಿನಿಮಾ ದೇಶಾದ್ಯಂತ ತೀವ್ರ ಕೂತೂಹಲ ಮೂಡಿಸಿದೆ,  ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾದ ಮೊದಲ ಕಾಪಿ ಸಿದ್ಧಗೊಳಿಸಿದ್ದಾರೆ.

ಕೆಜಿಎಫ್ ಮೊದಲ ಭಾಗದ ಸಿನಿಮಾ ಒಟ್ಟು 2 ಗಂಟೆ 30 ನಿಮಿಷ ಅಂದರೆ ಒಟ್ಟಾರೆ 150 ನಿಮಿಷಗಳ ಪ್ರದರ್ಶನ ಕಾಣಲಿದೆ,. ಮುಂಬಯಿ ರಸ್ತೆಯ ರಾಕಿ ಎಂಬ ವ್ಯಕ್ತಿಯ ಕುರಿತ ಕಥೆಯಾಗಿದ್ದು, ಕೊಲಾರ ಗೋಲ್ಡ್ ಮೈನ್ಸ್ ಗೆ ಕಾಲಿಟ್ಟ ಮೇಲೆ ಆತನ ದಾರಿ ಹೇಗೆ ಬದಲಾಯಿತು ಎಂಬ ಬಗ್ಗೆ ಚಿತ್ರ  ತಯಾರಾಗಿದೆ.

ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಸಿನಿಮಾ ಬಿಡುಗಡೆ ಬಗ್ಗೆ ಹಂಚಿಕೆದಾರರ ಜೊತೆ ಚರ್ಚಿಸಲಾಗುತ್ತಿದೆ. ಸಿನಿಮಾದ ಆಡಿಯೋ ಇನ್ನೂ ಬಹಿರಂಗವಾಗಿಲ್ಲ, ಶೀಘ್ರವೇ ಆಡಿಯೋ ಲಾಂಚ್ ಮಾಡುವ ನಿರೀಕ್ಷೆಯಿದೆ. ರವಿ ಬಸ್ರೂರ್ ಸಿನಿಮಾಗೆ ಸಂಗಿತ ನೀಡಿದ್ದಾರೆ, ಭುವನ್ ಗೌಡ ಛಾಯಾಗ್ರಹಣ ನೀಡಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp