ಅರ್ಜುನ್ ಸರ್ಜಾ ಹೇಳಿದ ಹಾಗೆ ಚಿತ್ರದ ಸ್ಕ್ರಿಪ್ಟ್ ಚೇಂಜ್ ಮಾಡಲಾಯಿತು: ಪೊಲೀಸರ ಮುಂದೆ ವಿಸ್ಮಯ ನಿರ್ದೇಶಕ ಸ್ಫೋಟಕ ಹೇಳಿಕೆ!

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದಾರೆ...

Published: 31st October 2018 12:00 PM  |   Last Updated: 31st October 2018 03:45 AM   |  A+A-


Sruthi Hariharan, Arjun Sarja, Arun Vaidyanathan

ಶೃತಿ ಹರಿಹರನ್, ಅರ್ಜುನ್ ಸರ್ಜಾ, ಅರುಣ್ ವೈಧ್ಯನಾಥನ್

Posted By : VS
Source : Online Desk
ಬೆಂಗಳೂರು: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದಾರೆ. 

ವಿಸ್ಮಯ ಚಿತ್ರ ನಿರ್ದೇಶಕ ಅರುಣ್ ವೈದ್ಯನಾಥನ್ ಶೃತಿ ಮಾಡಿರುವ ಆರೋಪದ ಕುರಿತಂತೆ ತಮ್ಮ ಹೇಳಿಕೆಯನ್ನು ಕೊಟ್ಟಿದ್ದಾರೆ. ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಇಬ್ಬರು ಒಳ್ಳೆಯ ನಟ, ನಟಿಯರು. ಅರ್ಜುನ್ ಸರ್ಜಾ ಚಿತ್ರದ ಕೆಲವು ಸೀನ್ ಗಳಿಗೆ ಕತ್ತರಿ ಹಾಕುವಂತೆ ಹೇಳಿದ್ದರು. ಚಿತ್ರದಲ್ಲಿ ಇನ್ನೂ ಎರಡು ಬೆಡ್ ರೂಂ ಸೀನ್ ಗಳಿತ್ತು. ಅವುಗಳಿಗೆ ಕತ್ತರಿ ಹಾಕುವಂತೆ ಅರ್ಜುನ್ ಸರ್ಜಾ ಹೇಳಿದ್ದರು. ಅಲ್ಲದೇ ಸ್ಕ್ರಿಪ್ಟ್ ಸಂದರ್ಭದಲ್ಲೇ ಅವುಗಳನ್ನು ತೆಗೆಯುವಂತೆ ಹೇಳಿದ್ದರು ಹೇಳಿದ್ದಾರೆ. 

ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ಕಿರುಕುಳ ನಡೆದಂತಹ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಚಿತ್ರೀಕರಣ ಮುಗಿದ ನಂತರ ಹೊರಗಡೆ ಏನಾದ್ರು ನಡೆದಿದೆಯಾ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಈ ಹಿಂದೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಮಾಹಿತಿಯನ್ನೇ ಅರುಣ್ ವೈಧ್ಯನಾಥನ್ ನೀಡಿದ್ದಾರೆ. 

ಪ್ರಕರಣ ಸಂಬಂಧಿಸಿದಂತೆ ನಿನ್ನೆ ಶೃತಿ ಆಪ್ತ ಸಹಾಯಕ ಕಿರಣ್ ಮತ್ತು ಚಿತ್ರದ ಸಹ ನಿರ್ದೇಶಕಿ ಮೋನಿಕಾ ತಮ್ಮ ಹೇಳಿಕೆ ನೀಡಿದ್ದರು. ಇಂದು ಅರುಣ್ ವೈದ್ಯನಾಥನ್, ಶೃತಿ ಸಹಾಯಕ ಬೋರೇಗೌಡ, ಶೃತಿ ಗೆಳತಿ ಯಶಸ್ವಿನಿ ವಿಚಾರಣೆ ನಡೆಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp