ದರ್ಶನ್ ಅಭಿನಯದ 'ಯಜಮಾನ' ಸೆಟ್‌ಗೆ ದಿಢೀರ್ ಭೇಟಿ ಕೊಟ್ಟ ಅದೃಷ್ಟ ದೇವತೆ ಯಾರು ಗೊತ್ತ!

ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಯಜಮಾನ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು ಈ ಮಧ್ಯೆ ಸೆಟ್ ಗೆ ಅದೃಷ್ಟ ದೇವತೆಯೊಬ್ಬರ ಆಗಮನವಾಗಿದೆ...

Published: 09th September 2018 12:00 PM  |   Last Updated: 09th September 2018 03:48 AM   |  A+A-


Vijayalakshmi-Darshan

ವಿಜಯಲಕ್ಷ್ಮೀ-ದರ್ಶನ್

Posted By : VS
Source : Online Desk
ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಯಜಮಾನ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು ಈ ಮಧ್ಯೆ ಸೆಟ್ ಗೆ ಅದೃಷ್ಟ ದೇವತೆಯೊಬ್ಬರ ಆಗಮನವಾಗಿದೆ. 

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಈ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದಿಢೀರ್ ಭೇಟಿ ಕೊಟ್ಟು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದರು. ಕೆಲ ಹೊತ್ತು ದರ್ಶನ್ ಜೊತೆ ಮಾತುಕತೆ ನಡೆಸಿದ ವಿಜಯಲಕ್ಷ್ಮಿ ಬಳಿಕ ಅಲ್ಲಿಂದ ತೆರಳಿದ್ದಾರೆ. 

ಕೆಲ ವರ್ಷಗಳ ಗ್ಯಾಪ್ ಬಳಿಕ ದರ್ಶನ್ ಚಿತ್ರದ ಶೂಟಿಂಗ್ ಸೆಟ್ ಗೆ ವಿಜಯಲಕ್ಷ್ಮೀ ಭೇಟಿ ನೀಡಿದ್ದು ಇಬ್ಬರೂ ಪರಸ್ಪರ ಮಾಡನಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಯಜಮಾನ ಚಿತ್ರವನ್ನು ಖ್ಯಾತ ನಿರ್ದೇಶಕ ಬಿ ಸುರೇಶ್ ನಿರ್ಮಾಣದ ಮಾಡುತ್ತಿದ್ದು ಪಿ ಕುಮಾರ್ ನಿರ್ದೇಶನ ಮಾಡುತ್ತಿದ್ದು ಕಿರಿಕ್ ಪಾರ್ಟಿ ಬೆಡಕಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp