ಕಾರ್ತಿ- ರಶ್ಮಿಕಾ ಅಭಿನಯದ ತಮಿಳು ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ರಾಮ್ ಖಳನಾಯಕ

ರಾಕಿ ಬಾಯ್ ಯಶ್ ಅಭಿನಯದ "ಕೆಜಿಎಫ್" ನಲ್ಲಿ ಗರುಡ ಪಾತ್ರ ನಿರ್ವಹಿಸಿದ್ದ ರಾಮ್ ಈಗ ತಮಿಳು ಸಿನಿಮಾದಲ್ಲಿ ಅವಕಾಶ ಪಡೆಇದ್ದಾರೆ.ತಮಿಳಿನ ಕಾರ್ತಿ ಅವರ ಮುಂದಿನ ಚಿತ್ರದಲ್ಲಿ ರಾಮ್ ನಟಿಸಲಿದ್ದಾರೆ.

Published: 01st April 2019 12:00 PM  |   Last Updated: 01st April 2019 12:10 PM   |  A+A-


Ram

ರಾಮ್

Posted By : RHN RHN
Source : Online Desk
ಬೆಂಗಳೂರು: ರಾಕಿ ಬಾಯ್ ಯಶ್ ಅಭಿನಯದ "ಕೆಜಿಎಫ್" ನಲ್ಲಿ ಗರುಡ ಪಾತ್ರ ನಿರ್ವಹಿಸಿದ್ದ  ರಾಮ್ ಈಗ ತಮಿಳು ಸಿನಿಮಾದಲ್ಲಿ ಅವಕಾಶ ಪಡೆಇದ್ದಾರೆ.ತಮಿಳಿನ ಕಾರ್ತಿ  ಅವರ ಮುಂದಿನ ಚಿತ್ರದಲ್ಲಿ ರಾಮ್ ನಟಿಸಲಿದ್ದಾರೆ.ಬಕ್ಕಿಯರಾಜ್ ಕಣ್ಣನ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರದಲ್ಲಿ ರಾಮ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕೆಲ ದಿನಗಳ ಚಿತ್ರೀಕರಣ ಮುಗಿಸಿದ ಬಳಿಕ ಮೇ  ನಲ್ಲಿ ಮುಂದಿನ ಶೆಡ್ಯೂಲ್ ನಲ್ಲಿ ಸಹ ರಾಮ್ ಚಿತ್ರದ ಸೆಟ್ ನಲ್ಲಿರಲಿದ್ದಾರೆ ಎನ್ನಲಾಗಿದೆ. ಆದರೆ ಚಿತ್ರ ನಿರ್ಮಾಪಕರ ತಂಡ ರಾಮ್ ತಮ್ಮ ಚಿತ್ರದಲ್ಲಿ ಅಭಿನಯಿಸುವ ವಿಚಾರವನ್ನು ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ.

ಇನ್ನು ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆಈ ಚಿತ್ರ ಚೊಚ್ಚಲ ತಮಿಳು ಚಿತ್ರವಾಗಿರಲಿದೆ. ಇದಾಗಲೇ ಕನ್ನಡ, ತೆಲುಗಿನಲ್ಲಿ ಅಭಿನಯಿಸುವ ಮೂಲಕ ಮನೆಮಾತಾಗಿರುವ ನಟಿ ಕಾರ್ತಿಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾಲಿವುಡ್ ನಲಿ ಅದೃಷ್ಟ ಪರೀಕ್ಷೆಗೆ ಸಿದ್ದವಾಗಿದ್ದಾರೆ.

ಎಸ್.ಆರ್. ಪ್ರಭು ವರ ಡ್ರೀಮ್ ರೈಟರ್ಸ್ ಪಿಕ್ಚರ್ಸ್ ನಿರ್ಮಾಣದ ಈ ಆಕ್ಷನ್ ಚಿತ್ರಕ್ಕೆ ಇನ್ನಷ್ಟೇ ಹೆಸರನ್ನಿಡಬೇಕಿದೆ.ವಿವೇಕ್ ಮೆರ್ವಿನ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp