ಶ್ರೀಮುರಳಿಯ 'ಭರಾಟೆ' ವಿಶೇಷ ಹಾಡಿಗೆ ಹೆಜ್ಜೆ ಹಾಕಲಿರುವ ರಚಿತಾ ರಾಮ್

ಚೇತನ್ ಕುಮಾರ್ ಎಂದಿಗೂ ತಮ್ಮ ಚಿತ್ರಗಳಲ್ಲಿ ಹೊಸತನವನ್ನು ತರಲು ಬಯಸುತ್ತಾರೆ.ಈಗ ಶ್ರೀಮುರಳಿ ನಾಯಕನಾಗಿರುವ ತಮ್ಮ ಮುಂದಿನ ಚಿತ್ರ "ಭರಾಟೆ"ಯಲ್ಲಿ ಸಹ ಇಂತಹಾ ಅವಕಾಶವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಸಾಬೀತು ಮಾಡಿದ್ದಾರೆ.

Published: 01st April 2019 12:00 PM  |   Last Updated: 01st April 2019 11:15 AM   |  A+A-


Rachita Ram

ರಚಿತಾ ರಾಮ್

Posted By : RHN RHN
Source : The New Indian Express
ಬೆಂಗಳೂರು: ಚೇತನ್ ಕುಮಾರ್ ಎಂದಿಗೂ ತಮ್ಮ ಚಿತ್ರಗಳಲ್ಲಿ ಹೊಸತನವನ್ನು ತರಲು ಬಯಸುತ್ತಾರೆ.ಈಗ ಶ್ರೀಮುರಳಿ ನಾಯಕನಾಗಿರುವ ತಮ್ಮ ಮುಂದಿನ ಚಿತ್ರ "ಭರಾಟೆ"ಯಲ್ಲಿ ಸಹ ಇಂತಹಾ ಅವಕಾಶವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಸಾಬೀತು ಮಾಡಿದ್ದಾರೆ.

ಇದಾಗಲೇ ಶ್ರೀಮುರಳಿ ಸೇರೆಇ ನಟ ನಟಿಯರ ಆಯ್ಕೆಯಿಂದಾಗಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲಕ್ಕೆಡೆ ಮಾಡಿರುವ ಚಿಚ್ತ್ರ "ಭರಾಟೆ"ಯಲಿ ಈಗ ರಚಿತಾ ರಾಮ್ ಸಹ ಅಭಿನಯಿಸುತ್ತಿದ್ದಾರೆ. ಹೌದು! ರಚಿತಾ ಶ್ರೀಮುರಳಿ ಜತೆಗೆ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಉತ್ತಮವಾದ ಚಿತ್ರವೊಂದರ ನಿರ್ಮಾಣಕ್ಕೆ ಪಣತೊಟ್ಟಿರುವ "ಭರಾಟೆ" ಚಿತ್ರತಂಡ ಹಾಡಿನ ಚಿತ್ರೀಕರಣಕ್ಕಾಗಿ ಸರಿಯಾದ ನಟಿಯ ಹುಡುಕಾಟ ನಡೆಸಿದ್ದು ಕಡೆಗೆ "ಬುಲ್ ಬುಲ್ " ನಟಿ ರಚಿತಾ ಆಯ್ಕೆಯಾಗಿದ್ದರು ಎಂದು ಮೂಲಗಳು ಹೇಳಿದೆ.

ಈ ಹಿಂದೆ "ರಥಾವರ" ಚಿತ್ರದಲ್ಲಿ ಶ್ರೀಮುರಳಿ ಹಾಗೂ ರಚಿತಾ ಜತೆಯಾಗಿ ನಟಿಸಿದ್ದನ್ನು ನಾವಿಲ್ಲಿಸ್ಮರಿಸಬಹುದು. ಆದರೆ ಈ ಚಿತ್ರದ ಒಂದ್ಯು ಹಾಡಿನಲ್ಲಿ ಮಾತ್ರ ಈ ನಟಿ ಕಾನಿಸಿಕೊಳ್ಳುತ್ತಿದ್ದಾರೆ. ಇನ್ನು ಹಾಡಿನ ಚಿತ್ರೀಕರಣ ಏಪ್ರಿಲ್  2ರಿಂದ ಪ್ರಾರಂಭವಾಗಲಿದ್ದು ಅದಕ್ಕಾಗಿ ಅದ್ದೂರಿಯಾದ ಸೆಟ್ ತಯಾರಾಗಿದೆ.

ಮೋಹನ್ ಬಿ. ಕೆರೆ ಕಲಾ ನಿರ್ದೇಶನದಲ್ಲಿ ಈ ಹಾಡು ಮೂಡಿ ಬರುತ್ತಿದ್ದು ಮೋಹನ್ ಸಂಯೋಜನೆ ಮ್ನಾಡುತ್ತಿದ್ದಾರೆ.

ಈ ಹಾಡಿನಲ್ಲಿ ಸುಮಾರು 200  ಡ್ಯಾನ್ಸರ್ಸ್, ಜೂನಿಯರ್ ಕಲಾವಿದರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.ಇನ್ನು ನಿರ್ದೇಶಕ ಚೇತನ್ ಸ್ವತಃ ಈ ಹಾಡು ರಚಿಸಿದ್ದಾರೆ.ಚಿತ್ರದಲ್ಲಿ ಐದು ಹಾಡುಗಳನ್ನು ಚೇತನ್ ಅವರೇ ಬರೆದಿದ್ದರೆ ಈ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸಾಯಿ ಕುಮಾರ್, ರವಿ ಶಂಕರ್ ಮತ್ತು ಅಯ್ಯಪ್ಪ ಪಿ. ಶರ್ಮ ಜತೆಗೂಡಿ ಶ್ರೀಲೀಲಾಸುರ್ಪ್ರೀತ್ಸ್ ಪ್ರೊಡಕ್ಷನ್ಸ್ ಹೆಸರಿನ ನಿರ್ಮಾಣ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ/ಗಿರೀಶ್ ಗೌಡ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp