ಯುಗಾದಿ ದಿನ 'ರಾಜಸ್ತಾನ್ ಡೈರೀಸ್' ಶೂಟಿಂಗ್ ಗೆ ಚಾಲನೆ

ಯುಗಾದಿಯ ಶುಭ ದಿನ ರಾಜಸ್ತಾನ ಡೈರೀಸ್ ಚಿತ್ರತಂಡ ಶೂಟಿಂಗ್ ಆರಂಭಿಸಲು ನಿರ್ಧರಿಸಿದೆ. ಚಿತ್ರದ ...
ಮಾನ್ವಿತಾ ಹರೀಶ್
ಮಾನ್ವಿತಾ ಹರೀಶ್
ಯುಗಾದಿಯ ಶುಭ ದಿನ ರಾಜಸ್ತಾನ ಡೈರೀಸ್ ಚಿತ್ರತಂಡ ಶೂಟಿಂಗ್ ಆರಂಭಿಸಲು ನಿರ್ಧರಿಸಿದೆ. ಚಿತ್ರದ ಮೊದಲ ಶೆಡ್ಯೂಲ್ ರಾಜಸ್ತಾನದಲ್ಲಿ 6ನೇ ತಾರೀಖು ಆರಂಭವಾಗಲಿದೆ.
ರಾಜು ಮೆಡಲ್ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದ ನಂದಿತಾ ಯಾದವ್ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಇದನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ಮಾನ್ವಿತಾ ಹರೀಶ್ ನಟಿಸುತ್ತಿದ್ದಾರೆ. ರಂಗಭೂಮಿಯ ಪ್ರತಿಭೆ ಸುಮುಖಾ ನಾಯಕನಾಗಿ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ,
ಸಿನಿಮಂತ್ರದ ಶಾಲಿನಿ ಜೀತೇಂದ್ರ ಠಾಕ್ರೆ ಇದನ್ನು ನಿರ್ಮಿಸುತ್ತಿದ್ದು ಈ ನಿರ್ಮಾಣ ಸಂಸ್ಥೆ ಹಿಂದೆ ಕೆಲವು ಸಿನಿಮಾಗಳನ್ನು ಮತ್ತು ಧಾರಾವಾಹಿಗಳನ್ನು ನಿರ್ಮಿಸಿತ್ತು. ಇದೀಗ ದ್ವಿಭಾಷೆಯಲ್ಲಿ ಚಿತ್ರ ನಿರ್ಮಿಸಲು ಮುಂದಾಗಿದೆ.
ರೊಮಾಂಟಿಕ್ ಡ್ರಾಮಾವಾಗಿರುವ ರಾಜಸ್ತಾನ ಡೈರಿಸ್ ನಲ್ಲಿ ರಾಜೇಶ್ ನಟರಂಗ, ಅರುಣ್ ಸಾಗರ್, ಸುಷ್ಮಾ ನಾನಯ್ಯ ಮತ್ತು ವರ್ಜಿನಿಯಾ ರೋಡ್ರಿಗಸ್ ಕೂಡ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com