ತೆಲುಗು ನಟ ಮೋಹನ್ ಬಾಬುಗೆ 1 ವರ್ಷ ಜೈಲು ಶಿಕ್ಷೆ

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ, ನಿರ್ಮಾಪಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮಂಚು ಮೋಹನ್ ಬಾಬು ಅವರಿಗೆ ಹೈದರಾಬಾದ್ ಕೋರ್ಟ್ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ...

Published: 03rd April 2019 12:00 PM  |   Last Updated: 03rd April 2019 04:47 AM   |  A+A-


Mohan Babu

ಮೋಹನ್ ಬಾಬು

Posted By : VS VS
Source : Online Desk
ಹೈದರಾಬಾದ್: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ, ನಿರ್ಮಾಪಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮಂಚು ಮೋಹನ್ ಬಾಬು ಅವರಿಗೆ ಹೈದರಾಬಾದ್ ಕೋರ್ಟ್ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. 

2010ರಲ್ಲಿ ನೀಡಿದ್ದ 40.75 ಲಕ್ಷ ರುಪಾಯಿ ಮೌಲ್ಯದ ಚೆಕ್ ಬೌನ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ವಿ. ರಘುರಾಮ್ ರಾವ್ 1 ವರ್ಷ ಜೈಲು ಶಿಕ್ಷೆ ವಿಧಿಸಿದರು. ನಂತರ ಮೋಹನ್ ಬಾಬುಗೆ ಜಾಮೀನು ನೀಡಿದರು.

ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ 1 ವಾರದ ನಂತರ ಮೋಹನ್ ಬಾಬುಗೆ ನ್ಯಾಯಾಲಯದಿಂದ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಸದ್ಯ ಜಾಮೀನು ಸಿಕ್ಕಿರುವುದರಿಂದ ಆತಂಕ ದೂರವಾಗಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp