ದೃಷ್ಟಿ ವಿಶೇಷಚೇತನ ಪಾತ್ರದಲ್ಲಿ ಶಿವಣ್ಣನನ್ನು ತೋರಿಸುವುದು ಜವಾಬ್ದಾರಿಯ ಕೆಲಸವಾಗಿತ್ತು: ಜಿವಿಆರ್ ವಾಸು

ಚೊಚ್ಚಲ ನಿರ್ದೇಶಕ ಜಿವಿಆರ್ ವಾಸು ಅವರಿಗೆ ತಮ್ಮ ಮೊದಲ ಚಿತ್ರದಲ್ಲಿಯೇ ಶಿವರಾಜ್ ಕುಮಾರ್ ರಂತಹ ನಟರಿಗೆ ...

Published: 03rd April 2019 12:00 PM  |   Last Updated: 03rd April 2019 02:13 AM   |  A+A-


A till from Shivarajkumar-starrer 'Kavacha'.

ಕವಚ ಚಿತ್ರದ ದೃಶ್ಯ

Posted By : SUD SUD
Source : The New Indian Express
ಚೊಚ್ಚಲ ನಿರ್ದೇಶಕ ಜಿವಿಆರ್ ವಾಸು ಅವರು ತಮ್ಮ ಮೊದಲ ಚಿತ್ರದಲ್ಲಿಯೇ ಶಿವರಾಜ್ ಕುಮಾರ್ ರಂತಹ ನಟರಿಗೆ ನಿರ್ದೇಶನ ಮಾಡುವ ಅವಕಾಶ ಸಿಕ್ಕಿರುವುದು ಸಹಜವಾಗಿ ಖುಷಿಯಾಗಿದ್ದಾರೆ. ಅವರ ಕವಚ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.

ಮಲಯಾಳಂ ಚಿತ್ರ ಒಪ್ಪಂ ನಿಂದ ಪ್ರೇರಣೆ ತೆಗೆದುಕೊಂಡು ಕನ್ನಡ ನೆಲಕ್ಕೆ ಒಪ್ಪುವಂತೆ ನಿರ್ದೇಶಿಸಲಾಗಿದೆಯಂತೆ. ಮಲಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ದರು.ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರದ್ದು ಕುರುಡನ ಪಾತ್ರ. ಕೃತಿಕಾ ಜಯರಾಮ್, ಇಶಾ ಕೊಪ್ಪಿಕರ್, ವಶಿಷ್ಟ ಸಿಂಹ, ಬೇಬಿ ಮೀನಾಕ್ಷಿ, ಇಟಿ ಆಚಾರ್ಯ ನಟಿಸಿದ್ದಾರೆ.

ಒಪ್ಪಂ ಮೂಲ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಕಥೆಯ ಮರುರಚನೆಯನ್ನು ಶಿವಣ್ಣ ಅವರಿಗೆ ವಿವರಿಸಿದೆ, ಆರಂಭದಲ್ಲಿ ಒಪ್ಪಿಕೊಳ್ಳಲಿಲ್ಲ. ನಂತರ ಕಥೆ ಕೇಳಿದ ನಂತರ ಅವರಿಗೆ ಹಿಡಿಸಿತು. ಶಿವಣ್ಣ ಅವರ ಕಿಲ್ಲಿಂಗ್ ವೀರಪ್ಪನ್ ಚಿತ್ರ ನಿರ್ಮಾಣ ಸಂದರ್ಭದಲ್ಲಿ ಹತ್ತಿರದಿಂದ ನೋಡಿದ್ದೆ. ಆಗಲೇ ಈ ಚಿತ್ರಕ್ಕೆ ಅವರೇ ಸೂಕ್ತ ಎಂದು ಅನಿಸಿತು ಎನ್ನುತ್ತಾರೆ ವಾಸು. ಅವರ ಸ್ನೇಹಿತ ಎಂ ವಿವಿ ಸತ್ಯನಾರಾಯಣ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಶಿವಣ್ಣನವರು 123 ಚಿತ್ರಗಳಲ್ಲಿ ನಟಿಸಿದ ಹಿರಿಯ ನಟ. ಜೋಗಿ, ಟಗರು , ಜನುಮದ ಜೋಡಿ, ತವರಿಗೆ ಬಾ ತಂಗಿ ಇಂತಹ ವಿಭಿನ್ನ ಚಿತ್ರ ಮಾಡಿದ್ದವರು. ದೃಷ್ಟಿ ವಿಕಲಚೇತನ ಪಾತ್ರದಲ್ಲಿ ಅವರನ್ನು ತೋರಿಸುವುದು ಜವಾಬ್ದಾರಿಯ ಕೆಲಸವಾಗಿತ್ತು. ಶಿವಣ್ಣನವರ ಸಹಕಾರವಿಲ್ಲದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದರು.

ಪಾತ್ರದ ಆಳಕ್ಕೆ ಹೋಗಲು ಸ್ವತಃ ವಾಸುರವರೇ ಪಾತ್ರವನ್ನು ಅಭಿನಯಿಸಿ ತೋರಿಸುತ್ತಿದ್ದರಂತೆ. ರಾಮ್ ಗೋಪಾಲ್ ವರ್ಮಾ ಜೊತೆ ಕೆಲ ಚಿತ್ರಗಳಲ್ಲಿ ಕೆಲಸ ಮಾಡಿದ್ದ ವಾಸು ಅವರಿಗೆ ರಾಮ್ ಗೋಪಾಲ್ ವರ್ಮಾ ವಿಶ್ವವಿದ್ಯಾಲವಿದ್ದಂತೆ, ಅವರಿಂದ ಕಲಿತುಕೊಳ್ಳುವುದಕ್ಕೆ ಕೊನೆಯಿಲ್ಲ ಎನ್ನುತ್ತಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp