'ಹನಿಮೂನ್‌'ಗೆ ಹೊರಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್

ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಈಗ ಹನಿಮೂನ್ ಗೆ ಹೊರಟಿದ್ದಾರೆ.
ಶಿವರಾಜಕುಮಾರ್
ಶಿವರಾಜಕುಮಾರ್
ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಈಗ ಹನಿಮೂನ್ ಗೆ ಹೊರಟಿದ್ದಾರೆ.
ಶಿವಣ್ಣ ಮದುವೆಯಾಗಿ ಇಷ್ಟು ವರ್ಷಗಳ ಬಳಿಕ ಯಾಕೆ ಈಗ ಹನಿಮೂನ್ ಗೆ ಹೋಗುತ್ತಿದ್ದಾರೆ ಅಂತ ಯೋಚಿಸುವ ಅಗತ್ಯವಿಲ್ಲ. ಶಿವಣ್ಣ ಈಗ ಹನಿಮೂನ್ ಗೆ ಹೋಗುತ್ತಿಲ್ಲ. ಬದಲಿಗೆ ಹನಿಮೂನ್ ಎನ್ನುವ ಹೊಸ ಪ್ರಾಜೆಕ್ಟ್ ಶುರು ಮಾಡಿದ್ದಾರೆ.
ಹನಿಮೂನ್ ಹೆಸರಿನಲ್ಲಿ ಹೊಸ ವೆಬ್ ಸೀರಿಸ್ ಅನ್ನು ಶಿವರಾಜ್ ಕುಮಾರ್ ಒಡೆತನದ ಶ್ರೀಮುತ್ತು ಬ್ಯಾನರ್ ನಲ್ಲಿ ಅದಾಗಲೇ ನಿರ್ಮಾಣ ಶುರುವಾಗಿದೆ. ಹನಿಮೂನ್ ಗೂ ಮುನ್ನ ಹೇಟ್ ಯು ರೋಮಿಯೋ ವೆಬ್ ಸೀರಿಸ್ ಈಗಾಗಲೇ ನಿರ್ಮಾಣವಾಗುತ್ತಿದೆ. 
ಈ ವೆಬ್ ಸೀರಿಸ್ ಬಿಡುಗಡೆಗೂ ಮುನ್ನವೇ ಹನಿಮೂನ್ ವೆಬ್ ಸೀರಿಸ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಹನಿಮೂನ್ ವೆಬ್ ಸೀರಿಸ್ ನಲ್ಲಿ ನಾಗಭೂಷಣ್ ಮತ್ತು ಸಂಜನಾ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com