ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ

ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನದಂದೇ ಹೊಸ ಚಿತ್ರವನ್ನು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಬರ್ತ್ ಡೇ ಗಿಫ್ಟ್ ನೀಡಿದ್ದಾರೆ.
ಅಲ್ಲು ಅರ್ಜುನ್ , ರಶ್ಮಿಕಾ ಮಂದಣ್ಣ
ಅಲ್ಲು ಅರ್ಜುನ್ , ರಶ್ಮಿಕಾ ಮಂದಣ್ಣ

ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ತಮ್ಮ  37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.  ಹುಟ್ಟುಹಬ್ಬದ ದಿನದಂದೇ  ಹೊಸ ಚಿತ್ರವನ್ನು ಘೋಷಿಸುವ ಮೂಲಕ ಅಭಿಮಾನಿಗಳಿಗೆ  ಬರ್ತ್ ಡೇ ಗಿಫ್ಟ್ ನೀಡಿದ್ದಾರೆ.

2018ರಲ್ಲಿ ತೆರೆ ಕಂಡಿದ್ದ ನಾ ಪೆರು ಸೂರ್ಯ ಬಾಕ್ಸ್ ಆಫೀಸ್ ನಲ್ಲಿ ಸೋತ ನಂತರ ಯಾವುದೇ ಚಿತ್ರವನ್ನು ಅಲ್ಲು ಅರ್ಜುನ್ ಮಾಡಿರಲಿಲ್ಲ. ರಂಗಸ್ಥಳಂ ಖ್ಯಾತಿಯ ಸುಕುಮಾರ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಲಿದ್ದಾರೆ ಎಂಬುದು ತಿಳಿದುಬಂದಿದೆ.

ಅಲ್ಲು ಅರ್ಜುನ್ ಜೊತೆಗೆ ನಾಯಕಿಯಾಗಿ ಅಭಿನಯಿಸುತ್ತಿರುವುದನ್ನು ರಶ್ಮಿಕಾ ಮಂದಣ್ಣ ಟ್ವಿಟರ್ ಮೂಲಕ ಸ್ಪಷ್ಪಪಡಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com