ಪ್ರೀಮಿಯರ್ ಪದ್ಮಿನಿ ಹರಾಜಿಗೆ ಚಿತ್ರತಂಡ ನಿರ್ಧಾರ

ಪ್ರೇಕ್ಷಕರನ್ನು ಸೆಳೆಯಲು ಪ್ರೀಮಿಯರ್ ಪದ್ಮಿನಿ ಚಿತ್ರತಂಡ ಹೊಸ ಐಡಿಯಾ ಮಾಡಿದೆ. ಪುರಾತನ ಪ್ರಸಿದ್ದ ಕಾರನ್ನು ಹರಾಜು ಹಾಕಲು ಚಿತ್ರತಂಡ ನಿರ್ಧರಿಸಿದೆ....
ಪ್ರೀಮಿಯರ್ ಪದ್ಮಿನಿ ಸಿನಿಮಾ ಸ್ಟಿಲ್
ಪ್ರೀಮಿಯರ್ ಪದ್ಮಿನಿ ಸಿನಿಮಾ ಸ್ಟಿಲ್
ಪ್ರೇಕ್ಷಕರನ್ನು ಸೆಳೆಯಲು ಪ್ರೀಮಿಯರ್ ಪದ್ಮಿನಿ ಚಿತ್ರತಂಡ ಹೊಸ ಐಡಿಯಾ ಮಾಡಿದೆ. ಪುರಾತನ ಪ್ರಸಿದ್ದ ಕಾರನ್ನು ಹರಾಜು ಹಾಕಲು ಚಿತ್ರತಂಡ ನಿರ್ಧರಿಸಿದೆ.
ಒಪೆನ್ ಟಾಪ್ ಇರುವ ಪ್ರೀಮಿಯರ್ ಪದ್ಮಿನಿ ಕಾರನ್ನು ಕೊಂಡುಕೊಳ್ಳಲು ಪ್ರೇಕ್ಷಕರಿಗೆ ಅವಕಾಶವಿದೆ, ಪ್ರೀಮಿಯರ್ ಪದ್ಮಿನಿ ಸಿನಿಮಾ ಏಪ್ರಿಲ್ 26 ರಂದು ತೆರೆಕಾಣಲಿದ್ದು, ಪ್ರಮುಖ ಥಿಯೇಟರ್ ನಲ್ಲಿ ಪ್ರದರ್ಶನಕ್ಕಿಡಲಾಗುವುದು. ಪ್ರೇಕ್ಷಕರು ಈ ಕಾರಿನ ಹರಾಜು ಕೂಗಬಹುದಾಗಿದೆ.
ಜಗ್ಗೇಶ್, ಸುಧಾರಾಣಿ ಮತ್ತು ಮಧೂ ಹಾಗೂ ಪ್ರಮೋದ್ ಅವರಿಗರುವಷ್ಟೇ ಸಿನಿಮಾದಲ್ಲಿ ಪ್ರೀಮಿಯರ್ ಪದ್ಮಿನಿಗೆ ಪ್ರಾಮುಖ್ಯತೆಯಿದೆ. ಕಾರನ್ನು ಉತ್ತಮ ಕಂಡಿಷನ್ ನಲ್ಲಿಟ್ಟುಕೊಳ್ಳುವುದು ಸವಾಲಿನ ಕೆಲಸವಾಗಿತ್ತು ಎಂದು ನಿರ್ಮಾಪಕಿ ಶೃತಿ ನಾಯ್ಡು ಹೇಳಿದ್ದಾರೆ, 
ಚಿತ್ರತಂಡ ಎರಡು ಕಾರುಗಳನ್ನು ಹೊಂದಿತ್ತು, ಉತ್ತಮವಾಗಿ ಕೆಲಸ ಮಾಡುವ ಕಾರು ಹುಡುಕಬೇಕಾಗಿತ್ತು, ಒಂದು ಕಾರನ್ನು ಇಟ್ಟುಕೊಂಡು ಅದರ ಜೊತೆ ಭಾನವನಾತ್ಮಕ ಸಂಬಂಧ ಇರಿಸಿಕೊಂಡು ಅದನ್ನು ಮೈಂಟೈನ್ ಮಾಡುವವರದ್ದು ಒಂದು ಗುಂಪು, ಅವರಿಗೆ ತಮ್ಮ ಕಾರು ಮಾರಾಟ ಮಾಡಲು ಇಷ್ಟವಿಲ್ಲ, ಅದೊಂದು ಆ್ಯಂಟಿಕ್ ಪೀಸ್, 
ಮತ್ತೊಂದು ರೀತಿಯ ಜನರಿರುತ್ತಾರೆ, ಉತ್ತಮ ಸ್ಥಿತಿಯಲ್ಲಿಲ್ಲದ ಕಾರನ್ನು ಮಾರಾಟ ಮಾಡಿಬಿಡುತ್ತಾರೆ., ಎರಡು ರೀತಿಯ ಕಾರನ್ನು ಹುಡುಕಲಾಯಿತು, ಕೊನೆಗೆ ಮೈಸೂರಿನಲ್ಲಿ ಒಂದು ಹಾಗೂ ಬೆಂಗಳೂರಿನಲ್ಲಿ ಒಂದು ಕಾರು ಸಿಕ್ಕಿತು ಎಂದು ಶೃತಿ ಹೇಳಿದ್ದಾರೆ,
ಪ್ರೀಮಿಯರ್ ಪದ್ಮಿನಿ ಕಾರನ್ನು ನವೀಕರಿಸುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು, ಈ ಹಳೇಯ ಕಾರುಗಳಲ್ಲಿ  ಹಿಂದಿನ ಕಾಲದ ಮೆಕ್ಯಾನಿಸಂ ಬಳಸಲಾಗುತ್ತದೆ, ಆ ಬಿಡಿಭಾಗಗಳನ್ನು ಹುಡುಕಿ ತರುವುದು ಸುಲಭವಾಗಿರಲಿಲ್ಲ,  ಅಂತಿಮವಾಗಿ ಅನುಭವಸ್ಥ ಕಾರ್ ಮೆಕ್ಯಾನಿಕ್ ಸಿಕ್ಕ  ನಮಗೆ ಬೇಕಾದ ರೀತಿಯ ಕಾರು ರೆಡಿಮಾಡಿಕೊಟ್ಟರು ಎಂದು ಹೇಳಿದ್ದಾರೆ.
ಕಾರನ್ನು 80 ಸಾವಿರಕ್ಕೆ ಖರೀದಿಸಲಾಯಿತು, ಅದನ್ನು ರಿಪೇರಿ ಮಾಡಿಸಲು 1 ಲಕ್ಷ ರು ಖರ್ಚು ಮಾಡಲಾಯಿತು. ಸದ್ಯ ಕಾರನ್ನು ಹರಾಜಿಗೆ ಇಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com