ರಾಯಚೂರು ವಿದ್ಯಾರ್ಥಿನಿ ಮಧುವನ್ನು ಕೊಂದ ಕೀಚಕರಿಗೆ ತಕ್ಕ ಶಾಸ್ತಿಯಾಗಲಿ: ನಟ ದರ್ಶನ್ ಟ್ವೀಟ್

ರಾಯಚೂರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಕುರಿತು ಅನುಮಾನಗಳಿದೆ. ಈ ಶಂಕಾಸ್ಪದ ಸಾವಿನ ತನಿಖೆ ಚುರುಕಾಗಬೇಕು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿತ್ರರಂಗದ ಇತರರು ಆಗ್ರಹಿಸಿದ್ದಾರೆ.

Published: 20th April 2019 12:00 PM  |   Last Updated: 20th April 2019 05:07 AM   |  A+A-


Actor Darshan condemns Raichur college student Madhu Pattar murder and demands justice

ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವನ್ನು ಕೊಂದ ಕೀಚಕರಿಗೆ ತಕ್ಕ ಶಾಸ್ತಿಯಾಗಲಿ: ನಟ ದರ್ಶನ್ ಟ್ವೀಟ್

Posted By : RHN RHN
Source : Online Desk
ಬೆಂಗಳೂರು: ರಾಯಚೂರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಕುರಿತು ಅನುಮಾನಗಳಿದೆ. ಈ ಶಂಕಾಸ್ಪದ ಸಾವಿನ ತನಿಖೆ ಚುರುಕಾಗಬೇಕು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿತ್ರರಂಗದ ಇತರರು ಆಗ್ರಹಿಸಿದ್ದಾರೆ.

ನಟ ದರ್ಶನ್ ಈ ಸಂಬಂಧ ಟ್ವೀಟ್ ಮಾಡಿದ್ದು "ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ತನಿಖೆ ಅತೀ ಶೀಘ್ರದಲ್ಲಿ ಸರಿಯಾಗಿ ನಡೆದು ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ಈ ರೇಪ್ & ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ನಮ್ಮ ದೇಶದಲ್ಲಿ ರೂಪುಗೊಳ್ಳಬೇಕು." ಎಂದು ಬರೆದಿದ್ದಾರೆ. ಜತೆಗ #JusticeForMadhu ಎಂಬ ಪೋಸ್ಟರ್ ಚಿತ್ರವನ್ನು ಸಹ ಹಾಕಿಕೊಂಡಿದ್ದಾರೆ.
ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಸಜೆಯಾಗಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು, ಅಭಿಯಾನಗಳು ನಡೆಯುತ್ತಿದೆ. ಸಾಮಾಜ್ಜಿಕ ತಾಣದಲ್ಲೈ ಸಹ ಮಧು ಸಾವಿಗೆ ನ್ಯಾಯಬೇಕೆಂಬ ಕೂಗು ಜೋರಾಗಿ ಕೇಳಿದೆ.  ಈಗ ಈ ಪ್ರಕರಣದಲ್ಲಿ ನ್ಯಾಯ ಸಿಗಲಿ ಎಂದು ರಾಜ್ಯದ ಯುವಜನತೆಗಳೊಂದಿಗೆ ಸ್ಯಾಂಡಲ್ ವುಡ್ ನಟ, ನಟಿಯರೂ ಕೈಜೋಡಿಸುತ್ತಿದ್ದಾರೆ.

ಸ್ಯಾಂಡಲ್ ವುಡ್ ನಟ ಭುವನ್ ಹಾಗೂ ನಟಿ ಹರ್ಷಿಕಾ ಪೂಣಚ್ಚ ಸಹ ಕಾಸಗಿ ಟ್ವಿವಿಯೊಂದರ ಜತೆ ಮಾತನಾಡಿ ವಿದ್ಯಾರ್ಥಿನಿಯ ಸಾವನ್ನು ಖಂಡಿಸಿದ್ದಾರೆ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp