ಜನಪ್ರಿಯ ರಾಧಾ ರಮಣ ಧಾರಾವಾಹಿಯಿಂದ ಶ್ವೇತಾ ಪ್ರಸಾದ್ ಔಟ್

ಕಲರ್ಸ್ ಕನ್ನಡ ಚಾನೆಲ್ ನ ಪ್ರಸಿದ್ದ ಧಾರವಾಹಿಗಳಲ್ಲಿ ರಾಧ ರಮಣ ಒಂದು. ರಾಧಾ ರಮಣ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸೀರಿಯಲ್ ಆಗಿದೆ.

Published: 20th April 2019 12:00 PM  |   Last Updated: 20th April 2019 03:05 AM   |  A+A-


A Still from Radha ramana serial

ರಾಧಾ ರಮಣ ಧಾರಾವಾಹಿ ಸ್ಟಿಲ್

Posted By : SD SD
Source : Online Desk
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನ ಪ್ರಸಿದ್ದ ಧಾರವಾಹಿಗಳಲ್ಲಿ ರಾಧ ರಮಣ ಒಂದು. ರಾಧಾ ರಮಣ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸೀರಿಯಲ್ ಆಗಿದೆ.

ಅದರಲ್ಲೂ ರಾಧಾ ಮಿಸ್ ಅಂತೂ ಪ್ರೇಕ್ಷಕರ ಹಾಟ್ ಫೇವರಿಟ್ ಆಗಿದ್ದರು.  ರಾಧಾ ರಮಣ ಧಾರಾವಾಹಿಯಲ್ಲಿ  ರಾಧಾ ಮಿಸ್ ಆಗಿ ಕಾಣಿಸಿಕೊಂಡಿದ್ದ ನಟಿ ಶ್ವೇತಾ ಪ್ರಸಾದ್ ಇನ್ಮುಂದೆ ಧಾರಾವಾಹಿಯಲ್ಲಿ ಇರುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.

ರಾಧಾ ರಮಣ ಸೀರಿಯಲ್ ನಲ್ಲಿ ಅಭಿನಯಸಲು ಶ್ವೇತಾ ಪ್ರಸಾದ್ ಒಂದು ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದ್ರೀಗ ಒಪ್ಪಂದ ಮುಗಿದು ವರ್ಷವೇ ಆಗಿದೆ. ಎರಡುವರೇ ವರ್ಷಗಳ ಕಾಲ ರಾಧಾ ಮಿಸ್ ಆಗಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಶ್ವೇತಾ ಈಗ ಸೀರಿಯಲ್ ನಿಂದ ಹೊರ ಬರುವ ನಿರ್ಧಾರ ಮಾಡಿದ್ದಾರೆ. 

ಇನ್ನು 15 ದಿನಗಳು ಮಾತ್ರ ಇರಲಿದ್ದಾರೆ ಶ್ವೇತಾ ರಾಧಾ ಮಿಸ್ ಆಗಿ ಇನ್ನು 15 ದಿನಗಳು ಮಾತ್ರ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ವೇತಾ ಜಾಗಕ್ಕೆ ಬರುವ ಹೊಸ ರಾಧಾ ಮಿಸ್ ಅನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp