'ದೇವಕಿ' ವಿತರಣಾ ಹಕ್ಕು ಖರೀದಿಸಿದ ಕೆ.ಆರ್.ಜಿ. ಸ್ಟುಡಿಯೋಸ್

ಲೋಹಿತ್ ಹೆಚ್ ನಿರ್ದೇಶನದ "ದೇವಕಿ" ಮೇನಲ್ಲಿ ತೆರೆಕಾಣಲಿರುವ ಮಹತ್ವಾಕಾಂಕ್ಷಿಯ ಕನ್ನಡ ಚಿತ್ರಗಳಲ್ಲಿ ಒಂದಾಗಿದೆ.ಇನ್ನೂ ಬಿಡುಗಡೆಯ ದಿನಾಂಕ ಅಂತಿಮವಾಗಿಒಲ್ಲ.ವಾದ ಕಾರಣ ಚಿತ್ರದ ಕುರಿತು ಹೆಚ್ಚು....

Published: 20th April 2019 12:00 PM  |   Last Updated: 20th April 2019 03:04 AM   |  A+A-


Devaki distribution rights bought by KRG Studios

ದೇವಕಿ ಚಿತ್ರದ ದೃಶ್ಯ

Posted By : RHN RHN
Source : The New Indian Express
ಬೆಂಗಳೂರು: ಲೋಹಿತ್ ಹೆಚ್ ನಿರ್ದೇಶನದ "ದೇವಕಿ" ಮೇನಲ್ಲಿ ತೆರೆಕಾಣಲಿರುವ ಮಹತ್ವಾಕಾಂಕ್ಷಿಯ ಕನ್ನಡ ಚಿತ್ರಗಳಲ್ಲಿ ಒಂದಾಗಿದೆ.ಇನ್ನೂ ಬಿಡುಗಡೆಯ ದಿನಾಂಕ ಅಂತಿಮವಾಗಿಒಲ್ಲ.ವಾದ ಕಾರಣ ಚಿತ್ರದ ಕುರಿತು ಹೆಚ್ಚು ವಿವರಣೆ ನೀಡಲು ಚಿತ್ರ ತಯಾರಕರು ನಿರಾಕರಿಸಿದ್ದಾರೆ. ಆದರೆ ಬಿಡುಗಡೆಗೆ ಮುನ್ನವೇ ಅನಿವಾಸಿ ಭಾರತೀಯರೊಬ್ಬರಿಗೆ ಸೇರಿದ ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರದ  ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಇದು ನಿರ್ದೇಶಕರಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

ಲೊಹಿತ್ ಪ್ರಕಾರ, ಅನಿವಾಸಿ ಬಾರತೀಯರು ಸ್ಟಾರ್ ನಟರ ಚಿತ್ರಗಳ ವಿತರಣೆ ಹಕ್ಕನ್ನು ಪಡೆಯುವುದು ಸಾಮಾನ್ಯ, ಆದರೆ ನಾಯಕಿ ಕೇಂದ್ರಿತ ಕಥಾವಸ್ತುವುಳ್ಳ ಚಿತ್ರವೊಂದನ್ನು ಕೆ.ಆರ್.ಜಿ. ಸ್ಟುಡಿಯೋಸ್ ಇದೇ ಮೊದಲ ಬಾರಿಗೆ ವಿತರಣೆಗಾಗಿ ಪಡೆಯುತ್ತಿರುವುದುಒಂದು ಸಕಾರಾತ್ಮಕ ನಡೆಯಾಗಿದೆ. ಎಂದು ಈ ಹಿಂದೆ "ಮಮ್ಮಿ ಸೇವ್ ಮಿ" ಚಿತ್ರಕ್ಕಾಗಿ ಪ್ರಿಯಾಂಕಾ ಉಪೇಂದ್ರ ಜತೆ ಕೆಲಸ ಂಅಡಿದ್ದ ನಿರ್ದೇಶಕ ಹೇಳಿದ್ದಾರೆ.

"ದೇವಕಿ" ಆಡಿಯೋ ಹಕ್ಕುಗಳನ್ನು ಇದಾಗಲೇ ಆನಂದ್ ಆಡಿಯೋ ಪಡೆದುಕೊಂಡಿದೆ.ಮುಂಬರುವ ದಿನಗಳಲ್ಲಿ ಆಡಿಯೋ ಬಿಡುಗಡೆ ನಡೆಯಲಿದೆ.. ರವೀಶ್ ಮತ್ತು ಅಕ್ಷಯ್ ನಿರ್ಮಿಸಿದ ಈ ಥ್ರಿಲ್ಲರ್ ಚಿತ್ರದಲ್ಲಿ  ಪ್ರಿಯಾಂಕಾ ಅವರ ಮಗಳು ಐಶ್ವರ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಎಚ್.ಸಿ. ವೇಣು  ಕ್ಯಾಮರಾಮನ್, ನೊಬಿನ್  ಪೌಲ್ ಸಂಗೀತ ಈ ಚಿತ್ರಕ್ಕಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp