ನಾಲ್ಕು ಭಾಷೆಗಳಲ್ಲಿ ಬಂತು 'ಕುರುಕ್ಷೇತ್ರ' ಪೋಸ್ಟರ್

ಮುನಿರತ್ನ ಅವರ "ಮುನಿರತ್ನ ಕುರುಕ್ಷೇತ್ರ" ಕನ್ನಡ ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ
ಮುನಿರತ್ನ ಕುರುಕ್ಷೇತ್ರ
ಮುನಿರತ್ನ ಕುರುಕ್ಷೇತ್ರ
ಬೆಂಗಳೂರು: ಮುನಿರತ್ನ ಅವರ "ಮುನಿರತ್ನ ಕುರುಕ್ಷೇತ್ರ" ಕನ್ನಡ ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಆದರೂ ನಿರ್ಮಾಪಕರು ಇನ್ನೂ ಚಿತ್ರ ಬಿಡುಗಡೆ ದಿನಾಂಕವನ್ನೇನೂ ಅಂತಿಮಗೊಳಿಸಿಲ್ಲ. ಆದರೆ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರ 2D ಮತ್ತು 3D ರೂಪಗಳಲಿ ಬಿಡುಗಡೆಯಾಗಲಿದೆ.
ಯುಗಾದಿ ಸಮಯದಲ್ಲೇ ಬಿಡ್ಗಡೆಯಾಗಿ ಪ್ರೇಕ್ಷಕರ ಮನಗೆಲ್ಲಲು ನಿರ್ಧರಿಸಿದ್ದರೂ ಲೋಕಸಭೆ ಚುನಾವಣೆ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.ಇತ್ತೀಚಿನ ವಿಚಾರವೆಂದರೆ "ಮುನಿರತ್ನ ಕುರುಕ್ಷೇತ್ರ" ಸಿನಿಮಾವು ಐದು ಭಾಷೆಗಳಲ್ಲಿ ತೆರೆ ಕಾಣಲಿದೆ. ಇದರ ಸೂಚನೆ ಎಂಬಂತೆ ಭಾನುವಾರ ಚಿತ್ರತಂಡ ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದೆ.
ಇನ್ನು ಅತಿ ಶೀಘ್ರವಾಗಿ ಹಿಂದಿ ಅವತರಣಿಕೆ ಸಹ ಬಿಡುಗಡೆಯಾಗಲಿದ್ದು ಬೇರೆಲ್ಲಾ ಭಾಷೆಗಳ ಡಬ್ಬಿಂಗ್ ಮುಗಿದ ನಂತರ ಅದನ್ನು ಕೈಗೆತ್ತಿಕೊಳ್ಳಲಾಗುತ್ತದೆ.ಮುನಿರತ್ನ ನಿರ್ಮಾಣ, ನಾಗಣ್ಣ ನಿರ್ದೇಶನದ "ಮುನಿರತ್ನ ಕುರುಕ್ಷೇತ್ರ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐವತ್ತನೇ ಚಿತ್ರವಾಗಿ ಬರಲಿದೆ.
ಪೌರಾಣಿಕ ಕಥಾನಕ ಒಳಗೊಂಡಿಇರುವ ಈ ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ ಕಾಣಿಸಲಿದ್ದಾರೆ.ರೆಬೆಲ್ ಸ್ಟಾರ್ ದಿ. ಅಂಬರೀಶ್ ಭೀಷ್ಮನ್ಗಿದ್ದರೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿದ್ದಾರೆ.ಅರ್ಜುನ್ ಸರ್ಜಾ ಕರ್ಣನಾಗಿ, ಅಭಿಮನ್ಯು ಪಾತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಇದ್ದಾರೆ.ಸ್ನೇಹಾ, ಮಾಘನಾ ರಾಜ್, ಹರಿಪ್ರಿಯಾ, ಸೋನು ಸೂದ್ ಹಾಗೂ ದ್ಯಾನಿಷ್ ಅಖ್ತರ್ ಸೈಫ್ ಸಹ ತೆರೆ ಹಂಚಿಕೊಂಡಿರುವ "ಕುರುಕ್ಷೇತ್ರ" ವಿ. ಹರಿಕೃಷ್ಣ ಸಂಗೀತವಿದೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ರಚನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com