ಶ್ರೀಲಂಕಾ ಬಾಂಬ್ ಸ್ಪೋಟ: ಗೆಳೆಯರನ್ನು ನೆನೆದು ಭಾವುಕರಾದ ಗೋಲ್ಡನ್ ಸ್ಟಾರ್

ಶ್ರೀಲಂಕಾದಲ್ಲಿ ನಡೆದ ಭೀಕರ ಬಾಂಬ್ ಸ್ಪೋಟದಲ್ಲಿ ಕರ್ನಾಟಕದ 7 ಜನ ಸಾವಿಗೀಡಾಗಿದ್ದಾರೆ. ಅದರಲ್ಲಿ ಖ್ಯಾತ ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗನೇಶ್ ಸ್ನೇಹಿತರೂ ಸೇರಿದ್ದು ನಟ ಗಣೇಶ್ ತಮ್ಮ ಸ್ನೇಹಿತನ ಅಗಲಿಕೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

Published: 23rd April 2019 12:00 PM  |   Last Updated: 23rd April 2019 09:03 AM   |  A+A-


Golden star Ganesh tweets emotional words about his friends who was dead in Sri Lanka bomb attack

ಶ್ರೀಲಂಕಾ ಬಾಂಬ್ ಸ್ಪೋಟ: ಗೆಳೆಯರನ್ನು ನೆನೆದು ಭಾವುಕರಾದ ಗೋಲ್ಡನ್ ಸ್ಟಾರ್

Posted By : RHN RHN
Source : Online Desk
ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಭೀಕರ ಬಾಂಬ್ ಸ್ಪೋಟದಲ್ಲಿ ಕರ್ನಾಟಕದ 7 ಜನ ಸಾವಿಗೀಡಾಗಿದ್ದಾರೆ. ಅದರಲ್ಲಿ ಖ್ಯಾತ ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗನೇಶ್ ಸ್ನೇಹಿತರೂ ಸೇರಿದ್ದು ನಟ ಗಣೇಶ್ ತಮ್ಮ ಸ್ನೇಹಿತನ ಅಗಲಿಕೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವೀಟ್ ಮೂಲಕ ಭಾವುಕ ಮಾತುಗಳನ್ನು ಹೇಳಿರುವ ನಟ ಗೆಳೆಯನೊಡನಿರುವ ಹಳೆಯ ಫೋಟೋ ಸಹ ಹಂಚಿಕೊಂಡಿದ್ದಾರೆ. ಪುಟ್ಟರಾಜು, ಎನ್ ಮಾರೇಗೌಡ (ಅಪ್ಪಿ ಎಂಬ ಇಬ್ಬರು ಗೆಳೆಯರನ್ನು ಗಣೇಶ್ ಈ ದುರಂತದಲ್ಲಿ ಕಳೆದುಕೊಂಡಿದ್ದಾರೆ.

"ನೀವಿಲ್ಲದ್ದನ್ನು ನಂಬಲೇ ಆಗುತ್ತಿಲ್ಲ, ನೋವನ್ನು ಹಂಚಿಕೊಳ್ಲಲು ಪದಗಳಿಲ್ಲ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಶ್ರೀಲಂಕಾದ ಉಗ್ರ ದಾಳಿಯನ್ನು ನಾನು ಖಂಡಿಸುತ್ತೇನೆ" ಗಣೇಶ್ ಬರೆದುಕೊಂಡಿದ್ದಾರೆ.
ಶ್ರೀಲಂಕಾದಲ್ಲಿ ಈಸ್ಟರ್ ಸಂಡೇ ದಿನವಾದ ಭಾನುವಾರ ನಡೆದ ಎಂಟು ಬಾಂಬ್ ಸ್ಪೊಟದಲ್ಲಿ ಕರ್ನಾಟಕದ ಏಳು ಮಂದಿ ಸೇರಿ 290 ಜನ ಸಾವನ್ನಪ್ಪಿದ್ದರು.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp