ಮಧ್ಯ ವಯಸ್ಸಿನ ಮಹಿಳೆ ಜೀವನ ಕೇಂದ್ರಿತ ಚಿತ್ರ 'ಪ್ರೀಮಿಯರ್ ಪದ್ಮಿನಿ': ಶೃತಿ ನಾಯ್ಡು

ಧಾರಾವಾಹಿ ನಿರ್ಮಾಪಕಿಯಾಗಿ 12 ವರ್ಷಗಳ ನಂತರ ಶೃತಿ ನಾಯ್ಡುಗೆ ನಿರ್ದೇಶಕ ರಮೇಶ್ ಇಂದ್ರ ಬಂದು ...
ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಜಗ್ಗೇಶ್, ಸುಧಾರಾಣಿ
ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಜಗ್ಗೇಶ್, ಸುಧಾರಾಣಿ
ಧಾರಾವಾಹಿ ನಿರ್ಮಾಪಕಿಯಾಗಿ 12 ವರ್ಷಗಳ ನಂತರ ಶೃತಿ ನಾಯ್ಡುಗೆ ನಿರ್ದೇಶಕ ರಮೇಶ್ ಇಂದ್ರ ಬಂದು ಕಥೆ ಹೇಳಿದಾಗ ತುಂಬಾ ಹಿಡಿಸಿತಂತೆ. ಧಾರಾವಾಹಿಯಲ್ಲಿ ಕೆಲಸ ಮಾಡಿ ಏಕತಾನತೆ ಅನುಭವಿಸಿ ಹೊಸತನ ಕಂಡುಕೊಳ್ಳಬೇಕು ಎಂದು ಅನಿಸಿತಂತೆ. ಈ ಸಂದರ್ಭದಲ್ಲಿ ಅವರ ಸ್ನೇಹಿತರು ಕೂಡ ಸಿನಿಮಾ ನಿರ್ಮಿಸುವಂತೆ ಒತ್ತಾಯಿಸಿದರಂತೆ.
ನಿರ್ದೇಶಕ ರಮೇಶ್ ಇಂದ್ರ ಪ್ರೀಮಿಯರ್ ಪದ್ಮಿನಿ ಕಥೆ ಹೇಳಿದಾಗ ಅದು ತಮಗೆ ಹೊಂದಿಕೆಯಾಗುತ್ತದೆ ಎಂದು ಅನ್ನಿಸಿ ಸಿನಿಮಾ ನಿರ್ಮಿಸಲು ನಿರ್ಧರಿಸಿದರು.
ಕೌಟುಂಬಿಕ ಆಧಾರಿತ ಚಿತ್ರವಾದ ಪ್ರೀಮಿಯರ್ ಪದ್ಮಿನಿ ಇಂದಿನ ಕಾಲಕ್ಕೆ ಪ್ರಸ್ತುತವಾಗಿದ್ದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಮಧ್ಯ ವಯಸ್ಸಿನ ದೃಢ ವಿಶ್ವಾಸದ ಮಹಿಳೆಯ ಜೀವನದ ಮೇಲೆ ಚಿತ್ರ ಕೇಂದ್ರೀಕೃತವಾಗಿದೆ. ಇದಕ್ಕೆ ದುಬಾರಿ ವೆಚ್ಚ ಅಥವಾ ದೊಡ್ಡ ಸೆಟ್, ಸ್ಟಂಟ್ಸ್ ಮತ್ತು ಹಾಡಿನ ಸಂದರ್ಭಗಳಿಗೆ ಹೆಚ್ಚು ವೆಚ್ಚವಾಗಿರಲಿಲ್ಲ. ಉತ್ತಮವಾಗಿ ಪೂರ್ವ ಯೋಜಿತ ಶೆಡ್ಯೂಲ್ ಮತ್ತು ನಟನೆ ಕೂಡ ಉತ್ತಮವಾಗಿದೆ ಎಂದರು ಚಿತ್ರದ ನಿರ್ಮಾಪಕಿ ಶೃತಿ ನಾಯ್ಡು.
ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಕಾರಿನ ಮಾಲಿಕತ್ವ ಹೊಂದಿರುವ ವ್ಯಕ್ತಿಗಳ ಮನೋಧರ್ಮವನ್ನು ಹೊರಹಾಕಲಾಗಿದ್ದು ಅದನ್ನು ಜಗ್ಗೇಶ್ ನಿಭಾಯಿಸಿದ್ದಾರೆ. ಅವರ ಕಾರಿನ ಚಾಲಕನ ಪಾತ್ರವನ್ನು ಪ್ರಮೋದ್ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸುಧಾರಾಣಿ ಮತ್ತ ಮಧು ಕೂಡ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com