ವರನಟ ಡಾ. ರಾಜ್ 90ನೇ ಜನ್ಮದಿನ: ತಾರಾಬಳಗ, ರಾಜವಂಶಸ್ಥರಿಂದ ಅಣ್ನಾವ್ರ ನೆನೆಕೆ

ಇಂದು (ಬುಧವಾರ) ವರನಟ ಡಾ. ರಾಜ್‌ಕುಮಾರ್‌ 90ನೇ ಜನ್ಮದಿನ. ರಾಜ್ಯಾದ್ಯಂತ ಅಣ್ಣಾವ್ರ ಅಭಿಮಾನಿಗಳು ಈ ದಿನವನ್ನು ಬಹು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ವರನಟನ 90ನೇ ಜನ್ಮದಿನ: ಚಿತ್ರನಟರು,ರಾಜವಂಶಸ್ಥರಿಂದ ಅಣ್ನಾವ್ರ ನೆನೆಕೆ
ವರನಟನ 90ನೇ ಜನ್ಮದಿನ: ಚಿತ್ರನಟರು,ರಾಜವಂಶಸ್ಥರಿಂದ ಅಣ್ನಾವ್ರ ನೆನೆಕೆ
ಬೆಂಗಳೂರು: ಇಂದು (ಬುಧವಾರ) ವರನಟ ಡಾ. ರಾಜ್‌ಕುಮಾರ್‌ 90ನೇ ಜನ್ಮದಿನ. ರಾಜ್ಯಾದ್ಯಂತ ಅಣ್ಣಾವ್ರ ಅಭಿಮಾನಿಗಳು ಈ ದಿನವನ್ನು ಬಹು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ರಕ್ತದಾನ , ಅನ್ನದಾನ ಸೇರಿ ನಾನಾ ಸಾಮಾಜಿಕ ಕಾರ್ಯಗಳನ್ನು ಅವರು ಹಮ್ಮಿಕೊಳ್ಳುತ್ತಿದ್ದಾರೆ. 
ಇತ್ತ ರಾಜ್ ಕುಟುಂಬ ಸದಸ್ಯರು ರಾಜ್ ಸಮಾಧಿ ಇರುವ ಬೆಂಗಳೂರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಸಮಾಧಿಗೆ ಪುಷ್ಪಗುಚ್ಚ ಇಟ್ಟು ನಮನ ಸಲ್ಲಿಸಿದ್ದಾರೆ.
ಇನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದಲೂ ರಾಜ್ ಹುಟ್ಟುಹಬ್ಬಕ್ಕೆ ವಿಶೇಷ ಖಾರ್ಯಕ್ರಮ ಆಯೋಜನೆಯಾಗಿದ್ದು ಈ ಕಾರ್ಯಕ್ರಮದಲ್ಲಿ ರಾಜ್ ಕುಟುಂಬ ಸದಸ್ಯರು ಸೇರಿ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.
ಚಿತ್ರನಟ, ನಟಿಯರಿಂದ ರಾಜ್ ಸ್ಮರಣೆ
ಕನ್ನಡದ ಖ್ಯಾತ ನಟ, ನಟಿಯರಿಂದ ರಾಜ್‌ಕುಮಾರ್‌ ಜನುಮದಿನದಂದು ಅವರ ಸ್ಮರಣೆ ನಡೆದಿದೆ. ಕಿಚ್ಚ ಸುದೀಪ್ ತಮ್ಮ ಟ್ವಿಟ್ತರ್ ಖಾತೆಯಲ್ಲಿ ರಾಜ್‌ಕುಮಾರ್‌  ಅವರನ್ನು ನೆನೆದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com