ಉಪೇಂದ್ರ ನಟನೆಯ 'ಐ ಲವ್ ಯೂ' ಸಿನಿಮಾ ಟ್ರೇಲರ್ ನಟ ಸುದೀಪ್ ರಿಂದ ಬಿಡುಗಡೆ

ಉಪೇಂದ್ರ ಮತ್ತು ರಚಿತಾ ರಾಮ್ ನಟಿಸಿರುವ 'ಐ ಲವ್ ಯೂ' ಚಿತ್ರವು ಮುಂದಿನ ತಿಂಗಳು ತೆರೆಗೆ ಬರಲಿದೆ. ಅದಕ್ಕೂ ಮೊದಲು ಕನ್ನಡ ಸಿನಿಪ್ರೇಕ್ಷಕರಿಗೆ ಭಾರಿ ಅಚ್ಚರಿಯೊಂದು ಕಾದಿದೆ...
ಉಪೇಂದ್ರ ಮತ್ತು  ಸುದೀಪ್
ಉಪೇಂದ್ರ ಮತ್ತು ಸುದೀಪ್
ಆರ್ ಚಂದ್ರು ನಿರ್ದೇಶನದ ಐ ಲವ್ ಯೂ ಸಿನಿಮಾ ರಿಲೀಸ್ ಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.
ಉಪೇಂದ್ರ ಮತ್ತು ರಚಿತಾ ರಾಮ್ ನಟಿಸಿರುವ  'ಐ ಲವ್ ಯೂ' ಚಿತ್ರವು ಮುಂದಿನ ತಿಂಗಳು ತೆರೆಗೆ ಬರಲಿದೆ. ಅದಕ್ಕೂ ಮೊದಲು ಕನ್ನಡ ಸಿನಿಪ್ರೇಕ್ಷಕರಿಗೆ ಭಾರಿ ಅಚ್ಚರಿಯೊಂದು ಕಾದಿದೆ. 'ಐ ಲವ್ ಯೂ' ಚಿತ್ರದ ಪ್ರೀ ರಿಲೀಸ್ ಟ್ರೇಲರ್‌ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಲಿದ್ದಾರೆ. 
ಐ ಲವ್ ಯೂ ಸಿನಿಮಾ  ಬಹಳಷ್ಟು ಕಾಲದಿಂದ ಬಿಡುಗಡೆ ಆಗಬಹುದು ಎಂದು ಕಾಯಲಾಗುತ್ತಿರುವ ಚಿತ್ರ. ಆದರೆ, ಇತ್ತೀಚಿಗಷ್ಟೆ ಈ ಚಿತ್ರಕ್ಕೆ 'ಸೆನ್ಸಾರ್' ಮುಗಿದಿದ್ದು. ಮುಂದಿನ ತಿಂಗಳು ತೆರೆಯ ಮೇಲೆ ದರ್ಶನ್ ನೀಡಲಿದೆ. ಅಷ್ಟರಲ್ಲಿ, ಈ ಪ್ರೀ-ರಿಲೀಸ್ ಟ್ರೇಲರ್ ಒಂದು ಕನ್ನಡ ಸಿನಿಪ್ರೇಕ್ಷಕರಿಗೆ ರೀಚ್ ಆಗಲಿದೆ ಎನ್ನಲಾಗಿದೆ. 
ರಿಯಲ್ ಸ್ಟಾರ್ ಉಪಂದ್ರ ಅವರು ಇತ್ತೀಚೆಗೆ ಲೋಕಸಭೆ ಚುನಾವಣೆ ನಿಮಿತ್ತ ತಮ್ಮದೇ ಪಕ್ಷದ ಪ್ರಚಾರಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. 'ಉತ್ತಮ ಪ್ರಜಾಕೀಯ ಪಕ್ಷ'ದ ಮೂಲಕ ಚುನಾವಣೆಯಲ್ಲಿ ಸಕ್ರಿಯರಾಗಿರುವ ನಟ ಉಪೇಂದ್ರ ಅವರು, ಪಕ್ಷದ ಪ್ರಚಾರ ಕಾರ್ಯದ ನಿಮಿತ್ತ ಇಡೀ ಕರ್ನಾಟಕ ಪ್ರವಾಸ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com