‘ಪ್ರೀಮಿಯರ್ ಪದ್ಮಿನಿ’ ಕಾರು ಹರಾಜಿಗೆ

ಕಿರುತೆರೆಯ ಧಾರಾವಾಹಿಗಳ ಖ್ಯಾತ ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಿಸಿರುವ, ಖ್ಯಾತ ನಟ ಜಗ್ಗೇಶ್ ಅಭಿನಯದ ‘ಪ್ರೀಮಿಯರ್ ಪದ್ಮಿನಿ’ ಚಿತ್ರದ...

Published: 26th April 2019 12:00 PM  |   Last Updated: 26th April 2019 06:00 AM   |  A+A-


Premier Padmini car

ಪ್ರೀಮಿಯರ್ ಪದ್ಮಿನಿ ಕಾರು

Posted By : PSN PSN
Source : UNI
ಬೆಂಗಳೂರು: ಕಿರುತೆರೆಯ ಧಾರಾವಾಹಿಗಳ ಖ್ಯಾತ ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಿಸಿರುವ, ಖ್ಯಾತ ನಟ ಜಗ್ಗೇಶ್ ಅಭಿನಯದ ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ಪ್ರಮುಖ ಭಾಗವಾಗಿರುವ ಪ್ರೀಮಿಯರ್ ಪದ್ಮಿನಿ ಕಾರನ್ನು ಹರಾಜಿಗಿಡಲಾಗಿದೆ.

ಶುಕ್ರವಾರ ಚಿತ್ರ ತೆರೆ ಕಂಡಿದ್ದು, ವೀಕ್ಷಕರನ್ನು ಸಿನೆಮಾದ ಜೊತೆಗೆ ಬೆಸೆಯಲು ಚಿತ್ರತಂಡ ಈ ಯೋಜನೆ ರೂಪಿಸಿದ್ದು, ಹರಾಜಿಗಾಗಿ ಕಾರನ್ನು ಬೆಂಗಳೂರಿನ ಅನುಪಮ ಥಿಯೇಟರ್ ಬಳಿ ಇರಿಸಲಾಗಿದೆ.

“ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ‘ಪ್ರೀಮಿಯರ್ ಪದ್ಮಿನಿ’ ಕಾರನ್ನೇ ಚಿತ್ರಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ ಮೇಲೆ, ಮೈಸೂರು, ಬೆಂಗಳೂರಿನಲ್ಲಿ ಅದಕ್ಕಾಗಿ ಹುಡುಕಾಟ ನಡೆಸಲಾಯಿತು. ಅಂತೂ ಇಂತೂ ಕಾರು ಖರೀದಿಸಿದ ಮೇಲೆ ಅದನ್ನು ಒಳ್ಳೆಯ ಕಂಡೀಷನ್ ಗೆ ತರುವುದು ಹೇಗೆ ಎಂಬ ಚಿಂತೆ. ಹಳೆಯ ವಾಹನವಾದ್ದರಿಂದ ಬಿಡಿ ಭಾಗಗಳ ರಿಪೇರಿ ಕಷ್ಟವಾಗಿತ್ತು.

ಹುಡುಕಾಟದ ಬಳಿಕ ಮೈಸೂರಿನ ಅನುಭವಿ ಮೆಕ್ಯಾನಿಕ್ ಒಬ್ಬರು ಅದನ್ನು ನವೀಕರಿಸಿದರು. 80 ಸಾವಿರ ರೂಪಾಯಿಗೆ ಕಾರ್ ಕೊಂಡಿದ್ದರೂ ಆದರೆ ಅದರ ನವೀಕರಣಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚವಾಯಿತು” ಎಂದು ನಿರ್ಮಾಪಕಿ ಶ್ರುತಿ ನಾಯ್ಡು ಹೇಳಿದ್ದಾರೆ.

ಪ್ರೀಮಿಯರ್ ಪದ್ಮಿನಿ ಚಿತ್ರ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಭರ್ಜರಿ ಶಿಳ್ಳೆ ಗಿಟ್ಟಿಸಿಕೊಂಡಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp