
ಅಕ್ಷತಾ ಶ್ರೀನಿವಾಸ್
Source : The New Indian Express
ಹೊಸ ಹಿರೋಯಿನ್ ಅಕ್ಷತಾ ಶ್ರೀನಿವಾಸ್ ಗೆ ಡಬಲ್ ದಮಾಕಾ, ಮಂಗಳೂರಿನ ಚೆಲುವೆ ಏಕಕಾಲದಲ್ಲಿ ಎರಡು ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರ ಮುಂದಿನ ಸಿನಿಮಾ ಶಿವ ತೇಜಸ್ಸು ಸಿನಿಮಾದ ಅಡಿಷನ್ ನಲ್ಲಿ ಪಾಲ್ಗೊಂಡಿದ್ದ ಅಕ್ಷತಾ ಅಲ್ಲಿ ಅವಕಾಶ ಪಡೆಯುವುದರ ಜೊತೆಗೆ ಬ್ರಹ್ಮಾಚಾರಿ ಸಿನಿಮಾ ನಿರ್ಮಾಪಕರ ಗಮನ ಸೆಳೆದಿದ್ದಾರೆ. ಚಂದ್ರ ಮೋಹನ್ ನಿರ್ದೇಶನದ ಬ್ರಹ್ಮಚಾರಿ 100 ಪರ್ಸೆಂಟ್ ವರ್ಜಿನ್ ಚಿತ್ರಕ್ಕಾಗಿ ಎರಡನೇ ಹಿರೋಯಿನ್ ಹುಡುಕಾಟ ನಡೆಸುತ್ತಿದ್ದ ತಂಡಕ್ಕೆ ಅಕ್ಷತಾ ಪಿಟ್ ಎನಿಸಿದ್ದಾರೆ.ಇದರಿಂದ ಎಕ್ಸೈಟ್ ಆಗಿರುವ ಅಕ್ಷತಾ ಶ್ರೀನಿವಾಸ್, ಪರಸಂಗ ಸಿನಿಮಾ ಮೂಲಕ ಸಿನಿಮಾ ವೃತ್ತಿ ಆರಂಭಿಸಿದೆ. ಬ್ರಹ್ಮಾಚಾರಿ ನನಗಾಗಿ ಮತ್ತೆ ಮಾಡುತ್ತಿರುವ ಸಿನಿಮಾದಂತಿದೆ ಎಂದು ಹೇಳಿದರು.ಈ ಸಿನಿಮಾದಲ್ಲಿ ಸತೀಶ್ ನೀನಾಸಂ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
ಉದಯ್ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ದತ್ತಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ದಿನ ಶಿವ ತೇಜಸ್ಸು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡರೆ ಮೂರು ದಿನ ಬ್ರಹ್ಮಚಾರಿ ಚಿತ್ರದ ಚಿತ್ರೀಕರಣ ಮುಗಿಸಿರುವುದಾಗಿ ತಿಳಿಸಿದ್ದಾರೆ. ಮಂಗಳೂರಿನಿಂದ ಈಗ ಬೆಂಗಳೂರಿಗೆ ಅಕ್ಷತಾ ಶ್ರೀನಿವಾಸ ಸ್ಥಳಾಂತರವಾಗಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news