ಶಾಲಾ ಬಾಲಕಿಯ ಪಾತ್ರದಲ್ಲಿ ನಟಿಸುವ ಆಸೆ ಈಡೇರಿದೆ- ಐಶಾನಿ ಶೆಟ್ಟಿ

ಶಾಲಾ ಬಾಲಕಿಯ ಪಾತ್ರದಲ್ಲಿ ನಟಿಸಬೇಕೆಂದುಕೊಂಡಿದ್ದ ಐಶಾನಿ ಶೆಟ್ಟಿ ಆಸೆ 'ನಮ್ ಗಣಿ ಬಿ. ಕಾಂ. ಪಾಸ್ 'ಚಿತ್ರದ ಪಾತ್ರದ ಮೂಲಕ ಈಡೇರಿದೆ. ಈ ಚಿತ್ರದ ಮೂಲಕ ಹೊಸ ಗೆಟಪ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

Published: 29th April 2019 12:00 PM  |   Last Updated: 29th April 2019 06:03 AM   |  A+A-


Aishani Shetty

ಐಶಾನಿ ಶೆಟ್ಟಿ

Posted By : ABN
Source : The New Indian Express
ಶಾಲಾ ಬಾಲಕಿಯ ಪಾತ್ರದಲ್ಲಿ ನಟಿಸಬೇಕೆಂದುಕೊಂಡಿದ್ದ ಐಶಾನಿ ಶೆಟ್ಟಿ  ಆಸೆ 'ನಮ್ ಗಣಿ ಬಿ. ಕಾಂ. ಪಾಸ್ 'ಚಿತ್ರದ ಪಾತ್ರದ ಮೂಲಕ ಈಡೇರಿದೆ. ಈ ಚಿತ್ರದ ಮೂಲಕ ಹೊಸ ಗೆಟಪ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಶಾಲಾ ದಿನಗಳ ನೆನಪು ಖುಷಿಯ ಅನುಭವ ನೀಡುತ್ತಿದೆ ಎನ್ನುತ್ತಾರೆ.

ಈ ಪಾತ್ರದ ಮೂಲಕ ಹೈಸ್ಕೂಲ್  ದಿನಗಳಿಗೆ ಜಾರಿದಾಗಿ ಹೇಳುವ ಐಶಾನಿ ಶೆಟ್ಟಿ, ಚಿತ್ರದ ಮೊದಲಾರ್ದ ಶಾಲಾ ದಿನಗಳಿಗೆ ಸಂಬಂಧಿಸಿದೆ.ಈ ಹುಡುಗಿಗೆ ಕಾಲೇಜ್ ಹುಡುಗನ ಮೇಲೆ ಕ್ರಸ್ ಆಗುತ್ತದೆ. ನಂತರ ಕಾಯ್ದು ಕಾಯ್ದು, ಶಾಲಾ ದಿನಗಳು ಮುಗಿದ ನಂತರ ಆತನನ್ನು  ಪ್ರೇಮದ ಬಲೆಯಲ್ಲಿ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವುದಾಗಿ ಎರಡು ಶೆಡ್ ನಲ್ಲಿ ಬರುವ ತನ್ನ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

ಅಭಿಷೇಕ್ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಅವರೇ ನಾಯಕರಾಗಿದ್ದಾರೆ. ಕಳೆದ ವಾರ ಚಿತ್ರೀಕರಣ ಮುಕ್ತಾಯಗೊಂಡಿದೆ. ಡಬ್ಬಿಂಗ್ ನಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ.

ಬೃಂದಾವನ ಎಂಟರ್ ಪ್ರೈಸಸ್ ಅಡಿಯಲ್ಲಿ ಮೂಡಿಬರುತ್ತಿರುವ ನಮ್ ಗಣಿ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ, ಜಹಂಗೀರ್ ಮತ್ತಿತರರ ತಾರಾಗಣವಿದೆ. ಸಂಗೀತ ನಿರ್ದೇಶಕ ವಿಕಾಸ್ ವಶಿಷ್ಠ ಅವರನ್ನು ಈ ಚಿತ್ರ ಪರಿಚಯಿಸಿದ್ದು, ನಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp