ಲಾಸ್ಯ ನಾಗರಾಜ್
ಲಾಸ್ಯ ನಾಗರಾಜ್

'ರಂಗನಾಯಕಿ' ಚಿತ್ರದಲ್ಲಿ ಲಾಸ್ಯ ನಾಗರಾಜ್ ಗೆ ಟೀಚರ್ ಪಾತ್ರ!

ರಂಗನಾಯಕಿ ವಾಲ್ಯೂಮ್ 1 ವರ್ಜಿನಿಟಿ ಚಿತ್ರದಲ್ಲಿ ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರೆ ಇದೀಗ ಲಾಸ್ಯ ನಾಗರಾಜ್ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ರಂಗನಾಯಕಿ ವಾಲ್ಯೂಮ್ 1 ವರ್ಜಿನಿಟಿ ಚಿತ್ರದಲ್ಲಿ ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರೆ ಇದೀಗ ಲಾಸ್ಯ ನಾಗರಾಜ್ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ವಾರ ಈ ಯೋಜನೆಯನ್ನು ಲಾಂಚ್ ಮಾಡಲಾಗಿತ್ತು. ಅಲ್ಲದೆ ಚಿತ್ರತಂಡ ಫಸ್ಟ್ ಲುಕ್ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿ ಲಾಸ್ಯ ಕೂರ್ಗಿ ಹುಡುಗಿಯಾಗಿ, ಶಿಕ್ಷಕಿಯಾಗಿ, ಹಾಗೂ ಅದಿತಿ ಪ್ರಭುದೇವಾಗೆ ಸ್ನೇಹಿತೆಯಾಗಿ  ಕಾಣಿಸಿಕೊಳ್ಳುತ್ತಿದ್ದು ಇದು ಮಹಿಳಾ ಪ್ರಧಾನಿ ಚಿತ್ರವಾಗಿದೆ. 
ಸಂಕಷ್ಟ ಎದುರಾದಾಗ ಮಹಿಳೆಯರೂ ಯಾವ ವಿಧದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ ಎಂಬುದು ಚಿತ್ರದ ಕಥಾವಸ್ತು. ಮೇ 5ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದಲ್ಲಿ ತ್ರಿವಿಕ್ರಮ ಮತ್ತು ಎಂಜಿ ಶ್ರೀನಿವಾಸ್ ನಟಿಸುತ್ತಿದ್ದಾರೆ. ಚಿತ್ರವನ್ನು ದಯಾಳ್ ಪದ್ಮನಾಭ್ ನಿರ್ದೇಶಿಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com