ಧ್ರುವ ಸರ್ಜಾ ಮುಂದಿನ ಚಿತ್ರಕ್ಕೆ ಪೊಗರು ಛಾಯಾಗ್ರಾಹಕ ವಿಜಯ್ ಮಿಲ್ಟನ್ ಸ್ಕ್ರಿಪ್ಟ್!

ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಪೊಗರು ಚಿತ್ರಕ್ಕೆ ಛಾಯಾಗ್ರಾಹಣ ಮಾಡುತ್ತಿದ್ದು ಇದೀಗ ಧ್ರುವರ ಮುಂದಿನ ಚಿತ್ರಕ್ಕಾಗಿ ಸ್ಟ್ರಿಪ್ಟ್ ಬರೆಯುತ್ತಿದ್ದಾರಂತೆ.
ವಿಜಯ್ ಮಿಲ್ಟನ್, ಧ್ರುವ ಸರ್ಜಾ
ವಿಜಯ್ ಮಿಲ್ಟನ್, ಧ್ರುವ ಸರ್ಜಾ
ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಪೊಗರು ಚಿತ್ರಕ್ಕೆ ಛಾಯಾಗ್ರಾಹಣ ಮಾಡುತ್ತಿದ್ದು ಇದೀಗ ಧ್ರುವರ ಮುಂದಿನ ಚಿತ್ರಕ್ಕಾಗಿ ಸ್ಟ್ರಿಪ್ಟ್ ಬರೆಯುತ್ತಿದ್ದಾರಂತೆ.
ವಿಜಯ್ ಮಿಲ್ಟನ್ ಅವರು ತಮಿಳಿನಲ್ಲಿ ಗೋಲಿಸೋಡಾ ಚಿತ್ರವನ್ನು ನಿರ್ದೇಶಿಸಿದ್ದರು. ಇದೀಗ ಅವರು ಧ್ರುವ ಸರ್ಜಾಗಾಗಿ ಸ್ಟ್ರಿಪ್ಟ್ ಬರೆಯುತ್ತಿದ್ದಾರೆ. ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕರೆ ಚಿತ್ರ ಕನ್ನಡ ಮತ್ತು ತಮಿಳು ದ್ವಿಭಾಷೆಯಲ್ಲಿ ರೆಡಿಯಾಗಲಿದೆ.
ಸದ್ಯ ಪೊರಗು ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರವನ್ನು ಬಿಕೆ ಗಂಗಾಧರ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಧ್ರುವಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com