'ಮೈಸೂರು ಮಸಾಲಾ'ಗಾಗಿ ರಘು ದೀಕ್ಷಿತ್ ಮೆಲೋಡಿ ಟ್ರ್ಯಾಕ್

ಮೈಸೂರು ಮೂಲದ ರಘು ದೀಕ್ಷಿತ್ ಈಗ ಅಜಯ್ ಸರ್ಪೇಶ್ಕರ್ ನಿರ್ದೇಶನದ ಮೈಸೂರು ಮಸಾಲ ಎಂಬ ವೈಜ್ಞಾನಿಕ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಈ ಚಿತ್ರಕ್ಕಾಗಿ ಹಾಡನ್ನು ರಚಿಸಿ ಸಂಯೋಜಿಸಿದ್ದಾರೆ.
ರಘು ದೀಕ್ಷಿತ್
ರಘು ದೀಕ್ಷಿತ್
ಮೈಸೂರು ಮೂಲದ ರಘು ದೀಕ್ಷಿತ್ ಈಗ ಅಜಯ್ ಸರ್ಪೇಶ್ಕರ್ ನಿರ್ದೇಶನದ ಮೈಸೂರು ಮಸಾಲ ಎಂಬ ವೈಜ್ಞಾನಿಕ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಈ ಚಿತ್ರಕ್ಕಾಗಿ ಹಾಡನ್ನು ರಚಿಸಿ ಸಂಯೋಜಿಸಿದ್ದಾರೆ.
ಅದೊಂದು ವಿಷಣ್ಣತೆಯ, ಕಾಡುವ ಮಧುರಗೀತೆಯಾಗಿದ್ದು  ಪ್ರೀತಿಪಾತ್ರರೊಂದಿಗಿನ ಬಾಂಧವ್ಯದ ಆಳವನ್ನು ಪರಿಶೋಧಿಸುತ್ತದೆ ಎನ್ನಲಾಗಿದೆ.
“ನಾನು ಕಳೆದುಹೋದ ಪ್ರೀತಿಯನ್ನು ಕಂಡುಕೊಳ್ಳುವ ಅನ್ವೇಷಣೆಯಲ್ಲಿ ನಾಯಕನ ಸಂಕಟವನ್ನು ಎತ್ತಿ ತೋರಿಸುವ ಒಂದು ಹಾಡು ನನಗೆ ಬೇಕಾಗಿತ್ತು ಹಾಡು ಮಧುರವಾಗಿರುವುದರೊಂದಿಗೆ ಇನ್ನೂ ಸ್ಥಳೀಯ ಭಾಷೆಯ ಟಚ್ ಬೇಕಿತ್ತು"ನಿರ್ದೇಶಕ ಸರ್ಪೇಶ್ಕರ್ ಹೇಳಿದ್ದಾರೆ.
ರಘು ದೀಕ್ಷಿತ್ ಸಂಗೀತ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಿದ್ದಾರೆ."ಹಾಡು ನನ್ನ ಇತ್ತೀಚಿನ ಸಂಯೋಜನೆಗಳ ಪೈಕಿ ಅತ್ಯುತ್ತಮವಾಗಿದೆ. ಅವಕಾಶಕ್ಕಾಗಿ ನಾನು ಅಜಯ್ ಸರ್ಪೇಶ್ಕರ್ ಅವರಿಗೆ ಧನ್ಯವಾದ ಹೇಳಲ್ಲ, ವಾಸುಕಿ ವೈಭವ್ ಸಾಹಿತ್ಯವನ್ನು ಬರೆಯಲು ಒಪ್ಪಿಕೊಂಡರು ಮತ್ತು ಅವರು ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. " ಅವರು ಹೇಳಿದರು
ಹಾಡಿನ ಅವಧಿ ಸುಮಾರು 5 ನಿಮಿಷಗಳಾಗಿದ್ದು ಸೆಪ್ಟೆಂಬರ್ 2ರ ಗಣೇಶ ಚತುರ್ಥಿ ಸಂದರ್ಭದಲ್ಲಿ ಈ ಹಾಡು ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com